ವಿಟ್ಲ: ಕೀರ್ತಿಶೇಷ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ಜಾನಕಿ ಅಮ್ಮ ಸ್ಮಾರಕ ಸಾಂಸ್ಕ್ರತಿಕ ಪ್ರತಿಷ್ಠಾನ ಪಡುಬೆಟ್ಟು ನೆಲ್ಯಾಡಿ ಇದರ ವತಿಯಿಂದ ಕೀರ್ತಿಶೇಷ ರ ಸಂಸ್ಮರಣೆ ,ಯಕ್ಷಗಾನ ಕಲಾವಿದರಿಗೆ ಪ್ರತಿಷ್ಠಾನದಿಂದ ಗೌರವಾರ್ಪಣೆ,ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಮಾಣಿಲದಲ್ಲಿ ನಡೆಯಿತು.
ಪ್ರತಿಷ್ಠಾನದ ಅಧ್ಯಕ್ಷ ಗುರುಮೂರ್ತಿ ಎಸ್ ಅದ್ಯಕ್ಷತೆ ವಹಿಸಿದ್ದರು. ಗಡಿನಾಡ ಯಕ್ಷಗಾನ ಕಲಾವಿದ ಮೂಲಡ್ಕ ನಾರಾಯಣ ಮಣಿಯಾಣಿ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಪ್ರತಿಷ್ಠಾನ ದ ಗೌರವಾಧ್ಯಕ್ಷ ,ಅರ್ಥಧಾರಿ ಗುಡ್ಡಪ್ಪ ಗೌಡ ಬಲ್ಯ ಇವರು ಸಂಸ್ಮರಣೆಯನ್ನ ನಡೆಸಿದರು. ಪತ್ರಕರ್ತ ,ಯಕ್ಷಗಾನ ಅರ್ಥಧಾರಿ ಶೇಣಿ ವೇಣುಗೋಪಾಲ ಭಟ್ ಸನ್ಮಾನಿತರ ಪರಿಚಯ ಶುಭಾಶಂಸನೆ ನೆರವೇರಿಸಿದರು. ಪ್ರತಿಷ್ಠಾನ ದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಯಕ್ಷಾಂತರಂಗ ಪೆರ್ಲ ಇದರ ನಿರ್ದೇಶಕ,ಶಿಕ್ಷಕ ಡಾ. ಸತೀಶ ಪುಣಿಚಿತ್ತಾಯರು ಕಾರ್ಯಕ್ರಮ ನಿರೂಪಿಸಿದರು.ಶೀಲಾವತಿ ಸನ್ಮಾನ ಪತ್ರ ವಾಚಿಸಿದರು.ಕೃತ್ತಿಕಾ ಖಂಡೇರಿ ಪ್ರಾರ್ಥಿಸಿದರು. ಶೇಣಿ ವೇಣುಗೋಪಾಲ ಭಟ್ ವಂದಿಸಿದರು.ಸನ್ಮಾನ ಕಾರ್ಯಕ್ರಮದ ನಂತರ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ನಡೆಯಿತು.