ಚಂದ್ರಯಾನ ಯಶಸ್ವಿಗಾಗಿ ಸವಣೂರು ಬಸದಿ,ಮುಗೇರು ದೇವಸ್ಥಾನದಲ್ಲಿ ಪ್ರಾರ್ಥನೆ

0

ಸವಣೂರು: ಭಾರತೀಯರ ಮಹಾ ನಿರೀಕ್ಷೆಯ, ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಸವಣೂರು ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹಾಗೂ ಸವಣೂರು ಪುದುಬೆಟ್ಟು ಚಂದ್ರನಾಥ ಬಸದಿಯ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಆ.23ರಂದು ವಿಶೇಷ ಪ್ರಾರ್ಥನೆ ನಡೆಯಿತು.

ಸವಣೂರು ಮುಗೇರು ಶ್ರೀಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಅರ್ಚಕ ಪದ್ಮನಾಭ ಕುಂಜತ್ತಾಯ ಅವರು ಪ್ರಾರ್ಥನೆ ಸಲ್ಲಿಸಿ ಹಾಲು ಪಾಯಸ ಸೇವೆ ಮಾಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಗ್ರಾ.ಪಂ.ಸದಸ್ಯ ತೀರ್ಥರಾಮ ಕೆಡೆಂಜಿ ಉಪಸ್ಥಿತರಿದ್ದರು.

ಸವಣೂರು ಬಸದಿಯಲ್ಲಿ ಅರ್ಚಕ ಶ್ರೇಯಾಂಸ ಕುಮಾರ್ ಇಂದ್ರ ಅವರು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣೂರು ಗ್ರಾ.ಪಂ.ಸದಸ್ಯ ತೀರ್ಥರಾಮ ಕೆಡೆಂಜಿ,ಸವಣೂರು ಗ್ರಾ.ಪಂ.ಮಾಜಿ ಸದಸ್ಯ ಸತೀಶ್ ಬಲ್ಯಾಯ,ಪಾದೆಬಂಬಿಲ ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷ ಪುಟ್ಟಣ್ಣ ಪರಣೆ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಕೀರ್ತನ್ ಕೋಡಿಬೈಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here