ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿಯೂ ಸಮಗ್ರ ಪ್ರಶಸ್ತಿ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಾಥಮಿಕ ಬಾಲಕರ ಗುಂಪು ಯೋಗಾಸನ ವಿಭಾಗದಲ್ಲಿ ಮೋನಿಶ್ ಟಿ ಪ್ರಥಮ ಸ್ಥಾನ ರೋಷನ್ ಪಿ ಜೆ ತೃತೀಯ ಸ್ಥಾನ ಮತ್ತು ಸಂಜನ್ ಚತುರ್ಥ ಸ್ಥಾನವನ್ನು ಪಡೆದಿರುತ್ತಾರೆ. ಹಾಗೆಯೇ ಪ್ರಾಥಮಿಕ ಬಾಲಕರ ಅಥ್ಲೆಟಿಕ್ ವಿಭಾಗದಲ್ಲಿ ಹಾರ್ದಿಕ್ ಕೆ ಎಚ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಪ್ರಾಥಮಿಕ ಬಾಲಕಿಯರ ಗುಂಪು ಯೋಗಾಸನ ವಿಭಾಗದಲ್ಲಿ ಶ್ರೀಮಾ ಕೆ ಎಚ್ ಪ್ರಥಮ ಸ್ಥಾನ ಹಾಗೂ ಅಥ್ಲೆಟಿಕ್ ಯೋಗಾಸನದಲ್ಲಿ ಸಾನ್ವಿಕ ಎಚ್ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿಯೂ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಪ್ರೌಢಶಾಲಾ ಬಾಲಕರ ಗುಂಪು ಯೋಗಾಸನ ವಿಭಾಗದಲ್ಲಿ
ಕಿಶನ್ ಪಿ ಜೆ ದ್ವಿತೀಯ ಸ್ಥಾನ, ಹಂಶಿತ್ ಕುಮಾರ್ ಎ ತೃತೀಯ ಸ್ಥಾನ, ಯಶಸ್ವಿ ಕೆ ಪಂಚಮ ಸ್ಥಾನವನ್ನು ಪಡೆಯುವ ಮೂಲಕ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.

ಪ್ರೌಢಶಾಲಾ ಬಾಲಕಿಯರ ಗುಂಪು ಯೋಗಾಸನ ಸ್ಪರ್ಧೆಯಲ್ಲಿ ಸ್ವಾತಿ ಟಿ ತೃತೀಯ ಸ್ಥಾನ, ರಿದಮಿಕ ಯೋಗಾಸನ ಸ್ಪರ್ಧೆಯಲ್ಲಿ ಅನುಶ್ರೀ ಎ ಎಂ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಎಂಟನೇ ತರಗತಿ ಬಾಲಕಿಯರ ಗುಂಪು ಯೋಗಾಸನ ಸ್ಪರ್ಧೆಯಲ್ಲಿ ಪ್ರಣಮ್ಯ ರೈ ಪ್ರಥಮ ಸ್ಥಾನ ಮತ್ತು ಅಪೇಕ್ಷ ಕೆ ಎನ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಯೋಗ ಕುಮಾರ ಪ್ರಶಸ್ತಿಯನ್ನು ಮೋನಿಶ್ ಟಿ ಮತ್ತು ಯೋಗಕುಮಾರಿ ಪ್ರಶಸ್ತಿಯನ್ನು ಶ್ರೀಮಾ ಕೆ ಎಚ್ ಪಡೆದುಕೊಂಡಿರುತ್ತಾರೆ.

ವಿಜೇತ ವಿದ್ಯಾರ್ಥಿಗಳು ಎಸ್ ಡಿ ಎಮ್ ಉಜಿರೆಯಲ್ಲಿ ನಡೆಯುವಂತಹ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಇವರನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ ಎಂ ಬಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಶಾಲಾ ಮುಖ್ಯಗುರು ಸರಸ್ವತಿ ಎಂ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದರು. ಇವರಿಗೆ ಸಂಸ್ಥೆಯ ಯೋಗ ಶಿಕ್ಷಕಿ ಶ್ರೀಮತಿ ಶಶಿಕಲಾ ತರಬೇತು ನೀಡಿರುತ್ತಾರೆ.
ದೈಹಿಕ ಶಿಕ್ಷಣ ಶಿಕ್ಷಕರಾದ ಜಯಚಂದ್ರ ಮತ್ತು ವನಿತಾ ಸಹಕರಿಸಿದರು.

LEAVE A REPLY

Please enter your comment!
Please enter your name here