ನನ್ನ ಗ್ರಾಮದ ಆಡಳಿತ ಎಲ್ಲಾ ಗ್ರಾಮಗಳಿಗೂ ಮಾದರಿಯಾಗಬೇಕು: ಶಾಸಕ ಅಶೋಕ್ ರೈ
ಪುತ್ತೂರು: ಕೋಡಿಂಬಾಡಿ ಗ್ರಾಪಂ ಆಡಳಿತ ಹಲವು ವರ್ಷಗಳ ಕಾಲ ಬಿಜೆಪಿ ಆಡಳಿತದ ತೆಕ್ಕೆಯಲ್ಲಿತ್ತು, ಜನತೆ ಬದಲಾವಣೆ ಬಯಸಿದ್ದರು ನಾವು ಬದಲಾವಣೆಯನ್ನು ಮಾಡಿದ್ದೇವೆ, ಗ್ರಾಮದ ಅಭಿವೃದ್ದಿಗಾಗಿ ಕೋಡಿಂಬಾಡಿಯಲ್ಲಿ ಕಾಂಗ್ರೆಸ್ ಆಡಳಿತದ ಪಂಚಾಯತ್ ಬಂದಿದೆ, ಉತ್ತಮ ಆಡಳಿತ ನಡೆಸುವ ಮೂಲಕ ನನ್ನ ಹುಟ್ಟೂರ ಗ್ರಾಪಂ ಕ್ಷೇತ್ರದ ಎಲ್ಲಾ ಗ್ರಾಪಂಗಳಿಗೂ ಮಾಡದರಿಯಾಗಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ತನ್ನ ಹುಟ್ಟೂರಿನ ಕೋಡಿಂಬಾಡಿ ಗ್ರಾಮಪಂಚಾಯತ್‌ನಲ್ಲಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚುವರಿ ನಾಲ್ಕು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ ಬಂದಿದೆ, ಸುಭದ್ರ ಮತ್ತು ಭೃಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಇತರೆ ಪಕ್ಷದ ಸದಸ್ಯರು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ನಾವು ಯಾರಿಗೂ ಬಲವಂತ ಮಾಡಿಲ್ಲ, ಕಾಂಗ್ರೆಸ್‌ನ ತತ್ವ ಸಿದ್ದಾಂತವನ್ನು ಮೆಚ್ಚಿ ಬಿಜೆಪಿಯಲ್ಲಿದ್ದವರು ನಮ್ಮ ಜೊತೆ ಸೇರಿಕೊಳ್ಳುತ್ತಿರುವುದು ಉತ್ತಮ ವಿಚಾರವಾಗಿದೆ. ನನ್ನ ಹುಟ್ಟೂರ ಗ್ರಾಪಂ ನಲ್ಲಿ ಬಿಜೆಪಿ ಆಡಳಿತವಿತ್ತು ಅದನ್ನು ಬದಲಾವಣೆ ಮಾಡಲಾಗಿದೆ. ಗ್ರಾಪಂ ಸದಸ್ಯರು ಸೇರಿದಂತೆ ಅನೇಕ ಮಂದಿ ಇತರೆ ಪಕ್ಷದ ಸದಸ್ಯರು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ.
ನೂತನ ಆಡಳಿತ ಇತಿಹಾಸವನ್ನು ನಿರ್ಮಿಸಬೇಕು:
ನೂತನವಾಗಿ ಅಧಿಕಾರಕ್ಕೆ ಬಂದ ಆಡಳಿತ ಇತಿಹಾಸವನ್ನು ನಿರ್ಮಿಸಬೇಕು. ಈ ಹಿಂದಿನ ಆಡಳಿತದಿಂದ ಬೇಸತ್ತ ಜನ ಬದಲಾವಣೆ ಬಯಸಿದ್ದರು ಈ ಕಾರಣಕ್ಕೆ ಹಿಂದಿನ ಮಾದರಿಯಲ್ಲಿ ಆಡಳಿತ ನಡೆಸಬಾರದು ಗ್ರಾಮದ ಪ್ರತೀಯೊಬ್ಬ ಪ್ರಜೆಗೂ ಪಂಚಾಯತ್ ಆಡಳಿತದ ಬಗ್ಗೆ ಉತ್ತಮ ಭಾವನೆ ಬರುವ ರೀತಿಯಲ್ಲಿ ಕೆಲಸ ಮಾಡಬೇಕು. ಗ್ರಾಮದಲ್ಲಿ ಬಡವರಿಗೆ ಮನೆ ನಿರ್ಮಾಣಕ್ಕೆ ಸೈಟ್ ಮಾಡಿಕೊಡಬೇಕು. ಗ್ರಾಮದಲ್ಲಿ ಯಾರಿಗೂ ಮನೆ ಇಲ್ಲ, ಕುಡಿಯುವ ನೀರಿಲ್ಲ, ವಾಸಕ್ಕೆ ಮನೆ ಇಲ್ಲ ಎಂಬ ದೂರು ಬರಲೇಬಾರದು ಎಲ್ಲರಿಗೂ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಬೇಕು. ಅಧಿಕಾರಗಳು ಹೇಳಿದ್ದನ್ನೇ ಕೇಳುವುದಲ್ಲ ಸರಕಾರದ ಸುತ್ತೋಲೆ ಯನ್ನು ನಾವು ಅಧ್ಯಯನ ನಡೆಸಬೇಕು, ಬಡವರಿಗೆ ನೆರವಾಗುವ ಯೋಜನೆಗಳನ್ನು ಗ್ರಾಪಂ ಜಾರಿಗೆ ತರಬೇಕು ಎಂದು ಹೇಳಿದರು. ಬಡವರ ಕೆಲಸವನ್ನು ಚಾಚೂ ತಪ್ಪದೆ ಮಾಡಬೇಕು, ಭೃಷ್ಟಾಚಾರ ಮುಕ್ತ ಆಡಳಿತ ನಡೆಸುವ ಮೂಲಕ ನಾವು ನೊಂದವರ ಕಣ್ಣೀರೊರೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಡಿಜಿಟಲ್ ಪಂಚಾಯತ್ ಮಾಡುವ ಕನಸು ಇದೆ ಗ್ರಾಮಸ್ಥರ ಸಹಕಾರ ಬೇಕು: ಜಯಪ್ರಕಾಶ್ ಬದಿನಾರ್
ನೂತನವಾಗಿ ಅಧಿಕಾರ ಸ್ವೀಕರಿಸಿದ ಗ್ರಾಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ರವರು ಮಾತನಾಡಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಗ್ರಾಪಂ ಆಡಳಿತದಲ್ಲಿ ಯಾವುದೇ ತಾರತಮ್ಯವಿಲ್ಲದೆ ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿಕೊಳ್ಳುತ್ತೇವೆ, ಪಂಚಾಯತ್‌ನ ಎಲ್ಲಾ ಸದಸ್ಯರನ್ನು ವಿಸ್ವಾಸಕ್ಕೆ ತೆಗೆದುಕೊಂಡು ನಾವು ಮುಂದಕ್ಕೆ ಕೆಲಸ ಮಾಡಲಿದ್ದೇವೆ. ಶಾಸಕರ ನಿರ್ದೇಶನದಂತೆ ಭೃಷ್ಟಾಚಾರ ರಹಿತ ಆಡಳಿತವನ್ನು ನೀಡಲಿದ್ದು ಗ್ರಾಪಂ ನ್ನು ಡಿಜಿಟಲ್ ಪಂಚಾಯತನ್ನಾಗಿ ಪರಿವರ್ತನೆ ಮಾಡುತ್ತೇವೆ ಎಲ್ಲದಕ್ಕೂ ಗ್ರಾಮಸ್ಥರ ಮತ್ತು ಗ್ರಾಪಂ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ಗ್ರಾಮದಲ್ಲಿ ಮೂಲಬೂತ ಸೌಕರ್ಯಕ್ಕೆ ಮೊದಲ ಅಧ್ಯತೆಯನ್ನು ನೀಡಲಿದ್ದೇವೆ, ಕುಡಿಯುವ ನೀರು, ರಸ್ತೆ ಮತ್ತು ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ಯೋಜನೆ ನಮ್ಮ ಮುಂದೆ ಇದ್ದು ಇದಕ್ಕಾಗಿ ಶಾಸಕರ ನೆರವನ್ನು ನಾವು ಪಡೆಯಲಿದ್ದೇವೆ. ಅನೇಕ ವರ್ಷಗಳಿಂದ ಪೆಂಡಿAಗ್ ಇರುವ ನಿವೇಶನ ಹಂಚಿಕೆಯನ್ನು ಈ ಬಾರಿ ಮಾಡಲಿದ್ದೇವೆರ, ಗ್ರಾಮದಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಯೋಚನೆಯೂ ನಮ್ಮ ಮುಂದಿದ್ದು ಕೋಡಿಂಬಾಡಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಿದ್ದೇವೆ ಎಂದು ಹೇಳಿದರು.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ: ಮಲ್ಲಿಕಾ ಅಶೋಕ್ ಪುಜಾರಿ
ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಮಾತನಾಡಿ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ, ಗ್ರಾಪಂ ನ ಎಲ್ಲಾ ಸದಸ್ಯರು, ಪಕ್ಷದ ಮುಖಂಡರು , ಶಾಸಕರ ಮಾರ್ಗದರ್ಶನದಂತೆ ಕೆಲಸವನ್ನು ಮಾಡಲಿದ್ದು ಪಂಚಾಯತ್‌ನಲ್ಲಿ ಬಾಕಿ ಇರುವ ಮತ್ತು ಆಗಬೇಕಾದ ಅಭಿವೃದ್ದಿ ಕೆಲಸಗಳನ್ನು ಎಲ್ಲರ ಸಹಕಾರದಿಂದ ಮಾಡಲಿದ್ದೇವೆ ಎಂದು ಹೇಳಿದರು. ಕಳೆದ ಹಲವು ವರ್ಷಗಳಿಂದ ಅನೇಕ ಕೆಲಸಗಳು ನೆನೆಗುದಿಗೆ ಬಿದ್ದಿದೆ ಅವುಗಳಿಗೆ ವೇಗವನ್ನು ನೀಡುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಕೈವಶ ಮಾಡಿಕೊಂಡಿದ್ದೇವೆ: ಮುರಳೀಧರ್ ರೈ
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮುರಳೀದರ್ ರೈ ಮಠಂತಬೆಟ್ಟು ಮಾತನಾಡಿ ಬಿಜೆಪಿಯ ವಶದಲ್ಲಿದ್ದ ಕೋಡಿಂಬಡಿ ಗ್ರಾಪಂ ನ್ನು ಈ ಬಾರಿ ಕೈ ವಶ ಮಾಡಿಕೊಂಡಿದ್ದೇವೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ವ್ಯಾಪ್ತಿಯಲ್ಲಿ ಬಿಜೆಪಿ ತೆಕ್ಕೆಯಲ್ಲಿದ್ದ ನಾಲ್ಕು ಪಂಛಾಯತ್ ಕಾಂಗ್ರೆಸ್ ವಶ ಮಾಡಿಕೊಂಡಿದ್ದೇವೆ. ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆ ಮತ್ತು ಸುಭದ್ರ ಆಳಿತವನ್ನು ಮೆಚ್ಚಿ ನಮ್ಮ ಜೊತೆ ಗ್ರಾಪಂ ಸದಸ್ಯರುಗಳು ಕೈ ಜೋಡಿಸುತ್ತಿದ್ದಾರೆ, ಶಶಕರ ನೆರವಿನಿಂದ ನಾವು ನಾಲ್ಕು ಪಂಚಾಯತ್‌ಗಳಲ್ಲಿ ಅಧಿಕಾರ ಪಡೆದುಕೊಂಡಿದ್ದೇವೆ. ಉತ್ತಮ ಆಡಳಿತ ನೀಡುವ ಮೂಲಕ ಗ್ರಾಮದ ಬಡವರ ಸೇವೆಯೊಂದೇ ನಮ್ಮ ಉದ್ದೇಶವಾಗಿದೆ ವಿನಾ ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಕಾಂಗ್ರೆಸ್ ಪಂಚಾಯತ್ ಬರಬೇಕೆಂಬುದು ಗ್ರಾಮಸ್ಥರ ಆಶಯವಾಗಿತ್ತು ಅದರಂತೆ ನಾವು ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಉತ್ತಮ ಆಡಳಿತ ನೀಡಲಿದ್ದೇವೆ: ಡಾ. ರಾಜಾರಾಂ ಕೆ ಬಿ
ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ ಮಾತನಾಡಿ ಅಧಿಕಾರಕ್ಕೆ ಬಂದ ನೂತನ ಅಧ್ಯಕ್ಷ ಉಪಾಧ್ಯಕ್ಷರು ಗ್ರಾಮದ ಜನತೆಗೆ ಉತ್ತಮ ಆಡಳಿತವನ್ನು ನೀಡಲಿದ್ದಾರೆ. ಶಸಕರ ತವರು ಗ್ರಾಮವಾದ ಕಾರಣ ಜನರ ನೋಟ ಕೋಡಿಂಬಾಡಿಯತ್ತ ಇರುತ್ತದೆ ಈ ಕಾರಣಕ್ಕೆ ನಮ್ಮ ಗ್ರಾಪಂ ಎಲ್ಲರಿಗೂ ಮಾದರಿಯಾಗಿ ಕೆಲಸವನ್ನು ಮಾಡಬೇಕಿದೆ. ಬಡವರ ಕೆಲಸಗಳು ಸುಸೂತ್ರವಾಗಿ ನಡೆಯಬೇಕು, ಗ್ರಾಮದ ಪ್ರತೀಯೊಬ್ಬ ಪ್ರಜೆಗೂ ಸಂತಸವನ್ನು ನೀಡುವ ಆಡಳಿತ ನಮ್ಮದಾಗಬೇಕು ಎಂಬ ಭಾವನೆ ಪ್ರತೀಯೊಬ್ಬ ಗ್ರಾಪಂ ಸದಸ್ಯರಲ್ಲಿ ಇರಬೇಕು, ಜನರ ಸೇವೆಯನ್ನೇ ಗುರಿಯಗಿಟ್ಟು ಎಲ್ಲರೂ ಒಟ್ಟಾಗಿ ಪಕ್ಷ ಬೇದವಿಲ್ಲದೆ ಕೆಲಸ ಮಾಡಿದರೆ ಗ್ರಾಪಂ ಆಡಳಿತ ಉತ್ತಮವಾಗಿರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾಪಂ ಪಿಡಿಒ ರೀಹಿತ್, ಗ್ರಾಪಂ ಸದಸ್ಯರುಗಳಾದ ಜಗನ್ನಾಥ ಶೆಟ್ಟಿ ನಡುಮನೆ, ಪೂರ್ಣಿಮಾ ಯತೀಶ್ ಶೆಟ್ಟಿ , ಗೀತಾ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್ ಕಾಂಗ್ರೆಸ್ ಮುಖಂಡರುಗಳಾದ ಕ್ಲೆಮಿನ್ ಮಸ್ಕರೇನಸ್, ಪ್ರವೀಣ್ ಚಂದ್ರ ಆಳ್ವ, ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಉಲ್ಲಾಸ್ ಕೋಟ್ಯಾನ್, ರಾಜಶೇಖರ ಜೈನ್, ಬನ್ನೂರು ಸೊಸೈಟಿ ಅಧ್ಯಕ್ಷರಾದ ಪಂಜಿಗುಡ್ಡೆ ಈಶ್ವರಭಟ್, ಜಾನ್ ಕೆನೋಟ್, ಕೇಶವ ಭಂಡಾರಿ, ಸೀತಾರಾಮ ಶೆಟ್ಟಿ, ಶಿವಪ್ರಸಾದ್, ಉದ್ಯಮಿ ಸುದೇಶ್ ಶೆಟ್ಟಿ ಶಾಂತಿನಗರ, ಯೋಗೀಶ್ ಸಾಮಾನಿ, ಪ್ರೇಮಲತಾ, ವಿನುತಾ, ರೇಣುಖಾ, ಅಲ್ಪಸಂಖ್ಯಾತ ಜಿಲ್ಲಾ ಘಟಕದ ಮುಖಂಡರಾದ ನಝೀತ್ ಮಠ, ಅಬ್ದುಲ್ ರಹಿಮಾನ್ ಯೂನಿಕ್, , ಡಿಸಿಸಿ ಸದಸ್ಯೆ ಅಸ್ಮಾ ಗಟ್ಟಮನೆ, ವಿಜಯಲಕ್ಷಿö್ಮ, ಸುಬ್ಬಣ್ಣ ಶೆಟ್ಟಿ, ಪದ್ಮನಾಭ ಶೆಟ್ಟಿ, ಪ್ರಭಾಕರ ಸಾಮಾನಿ, ಸಿಲ್ವೆಸ್ಟರ್, ಪ್ರಕಾಶ್ ಗೌಡ ನೆಕ್ಕಿಲಾಡಿ, ಆಶಾ ಕಾರ್ಯಕರ್ತೆಯವರು, ಅಂಗನವಾಡಿ ಕಾರ್ಯಕತೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವಲಯಾಧ್ಯಕ್ಷರಾದ ಮೋನಪ್ಪ ಗೌಡ ಸ್ವಾಗತಿಸಿದರು.ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಪಾಧ್ಯಕ್ಷರ ಪರಿಚಯ:
ನೂತನವಾಗಿ ಅದಿಕಾರ ಸ್ವೀಕರಿಸಿದ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್‌ರವರು ಪುತ್ತೂರು ವಿಧಾನಸಭಾ ಕ್ಷೇತ್ರ ಇಂಟಕ್ ಅಧ್ಯಕ್ಷರಾಗಿ, ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷರಾಗಿ, ಕೋಡಿಂಬಾಡಿ ಸಾರ್ವಜನಿಕ ಗಣೇಶೋತ್ಸವ ಉಪಾಧ್ಯಕ್ಷರಾಗಿ ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿ, ಕಾಸರಗೋಡು ಚಿಪ್ಪಾರು ಕೋಟಿಚೆನ್ನಯ ಗರಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.
ಶಾಸಕ ಸಮ್ಮುಖದಲ್ಲೇ ಅಧಿಕಾರ ಸ್ವೀಕಾರ:
ಶಸಕರಾದ ಅಶೋಕ್ ರೈಯವರನ್ನು ಕೊಠಡಿಗೆ ಕರೆಸಿಕೊಂಡ ನೂತನ ಅಧ್ಯಕ್ಷ ಉಪಾಧ್ಯಕ್ಷರು ಶಾಸಕರ ಸಮ್ಮುಖದಲ್ಲೇ ಅಧಿಕಾರ ಸ್ವೀಕಾರ ಮಾಡಿದರು. ಶಾಸಕರು ನೂತನ ಸಾರಥಿಗಳಿಗೆ ಹಾರಾರ್ಪಣೆ ಮಾಡಿ ಗೌರವಿಸಿದರು. ಗ್ರಾಪಂ ಸಿಬಂದಿಗಳು ಮತ್ತು ನೂತನ ಆಡಳಿತ ಸಮಿತಿ ಪರವಾಗಿ ಶಾಕರನ್ನು ಶಾಲು ಹಾಕಿ ಪೇಟ ತೊಡಿಸಿ ಸನ್ಮಾನಿಸಿದರು.
ಪಟಾಕಿ ಸಿಡಿಸಿ ಸಂಭ್ರಮ:
ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮವನ್ನು ವ್ಯ÷್ಕತಪಡಿಸಿದರು. ಸುಮಾರು ೧೦ ವರ್ಷಗಳ ಬಳಿಕ ಕೋಡಿಂಬಾಡಿ ಗ್ರಾಪಂ ನಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಬಂದಿದ್ದು ಕಾರ್ಯಕರ್ತರ ಸಂತೋಷಕ್ಕೆ ಪಾರವೇ ಇರಲಿಲ್ಲ.