ಚಂದ್ರಯಾನ 3 ಯಶಸ್ವಿ ಹಿನ್ನೆಲೆ: ನರೇಂದ್ರ ಪ.ಪೂ. ಕಾಲೇಜಿನಲ್ಲಿ ಸಂಭ್ರಮಾಚರಣೆ

0

ಪುತ್ತೂರು: ಶಶಾಂಕನ ದಕ್ಷಿಣ ಧ್ರುವಕ್ಕೆ ಪ್ರವೇಶ ಮಾಡಿದ ಮೊದಲ ರಾಷ್ಟ್ರ ಭಾರತ. ಚಂದ್ರಯಾನ 3 ಕ್ಕೆ ಸಿಕ್ಕ ಯಶಸ್ಸು ಭರತ ಖಂಡದಲ್ಲಿ ಸಂಭ್ರಮ ಮೂಡಿಸಿದೆ.ಈ ಯಶಸ್ಸಿನಿಂದಾಗಿ ಅಭಿವೃದ್ಧಿ ಹೊಂದಿದ ನವಭಾರತದ ಉದಯವಾಗಿದೆ. ವೈಜ್ಞಾನಿಕ ವಿಕ್ರಮವೊಂದರ ಹೊತ್ತಿನಲ್ಲಿ ಈ ಹಿಂದೆಂದೂ ಕಂಡುಬರದ ಏಕತೆ,ಐಕ್ಯತೆ,ಉತ್ಸಾಹ ಭಾರತೀಯರಲ್ಲಿ ಪ್ರಕಟವಾಗಿದೆ.ಸಹಜವಾಗಿ ಇಡೀ ದೇಶದಲ್ಲಿ ವಿವಿಧ ರೀತಿಯಲ್ಲಿ ಜನರು ಸಂಭ್ರಮಿಸಿದ್ದಾರೆ. ಎಂದು ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಹೇಳಿದರು.


ನರೇಂದ್ರ ಪ.ಪೂ. ಕಾಲೇಜಿನಲ್ಲಿ ಚಂದ್ರಯಾನ 3 ರ ಯಶಸ್ವಿಯ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು. ಇಸ್ರೋದ ಈ ಯಶಸ್ಸು ಬರೀ ಅದರ ಯಶಸ್ಸು ಮಾತ್ರವಲ್ಲ.ಬರೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಿಕ್ಕ ಯಶಸ್ಸು ಮಾತ್ರವಲ್ಲ.ಇಡೀ ಭಾರತಕ್ಕೆ ಹಲವು ಕೋನಗಳಿಂದ ಸಿಕ್ಕ ಯಶಸ್ಸು.ಇದು ಭಾರತೀಯ ಯುವಜನತೆಯ ಚಿಂತನೆಯ ದಿಕ್ಕನ್ನೇ ಬದಲಿಸುವುದು ಖಚಿತ.ಎಂದು ಹೇಳಿದರು.


ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಕಾರ್ತಿಕ್ ಕುಮಾರ್ ಚಂದ್ರಯಾನ 3 ಯೋಜನೆಯ ವಿವರಗಳನ್ನು ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಸಂಚಾಲಕರಾದ ಸಂತೋಷ್ ಬಿ. ಮತ್ತು ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನು ಮಧುರಾ ಸ್ವಾಗತಿಸಿ ,ವಂದಿಸಿದರು.

LEAVE A REPLY

Please enter your comment!
Please enter your name here