ಕಬಕ ಸ.ಪ.ಪೂ.ಕಾಲೇಜಿನಲ್ಲಿ ಜೂನಿಯರ್ ರೆಡ್‌ಕ್ರಾಸ್ ಘಟಕದ ಕಾರ್ಯಾಗಾರ

0

ಕಬಕ: ಸರಕಾರಿ ಪದವಿಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ಘಟಕದ ವತಿಯಿಂದ ರಕ್ತವರ್ಗೀಕರಣ ಮತ್ತು ರಕ್ತಹೀನತೆಯ ದುಷ್ಪರಿಣಾಮಗಳು ಎಂಬ ವಿಷಯದ ಬಗ್ಗೆ ಕಾರ್ಯಾಗಾರ ಆ.23ರಂದು ನಡೆಯಿತು.

ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಪದ್ಮಾವತಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರ ಪದ್ದತಿಯು ರಕ್ತಹೀನತೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿರುವ ಬಗ್ಗೆ ವಿವರಿಸಿದರು. ಅವರು ಗುಂಪುಗಳು ಮತ್ತು ಅವುಗಳ ಮಹತ್ವವನ್ನು ವಿವರವಾಗಿ ತಿಳಿಸಿದರು.ಪ್ರಾಂಶುಪಾಲರಾದ ಶ್ರೀಧರ ರೈ ಕೆ ಯವರು ಅಧ್ಯಕ್ಷೀಯ ಮಾತುಗಳನ್ನಾಡಿದರು.ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ನಯನ ಕುಮಾರಿ .ಇ. ಸ್ವಾಗತಿಸಿ , ಇತಿಹಾಸ ಉಪನ್ಯಾಸಕಿ ಚಂದ್ರಿಕಾ ವಂದಿಸಿದರು.

LEAVE A REPLY

Please enter your comment!
Please enter your name here