ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ 55ನೇ ವರ್ಷದ ಪ್ರಯುಕ್ತ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠ ಕಲ್ಲಮೆ – ಸರ್ವೆ ಸಹಯೋಗದಲ್ಲಿ ಆ.26 ರಿಂದ ಸೆ.1ರ ತನಕ ಶ್ರೀ ರಾಮಾಯಣ ದರ್ಶನಂ ತಾಳಮದ್ದಳೆ ಸಪ್ತಾಹವು ಮಠದಲ್ಲಿ ಜರಗಲಿದೆ.ಆ.26ಕ್ಕೆ ಕಲ್ಲಮೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಡಾ. ಸೀತಾರಾಮ ಭಟ್ ದೀಪ ಪ್ರಜ್ವಲಿಸಿ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ.
ಬಳಿಕ ಶ್ರೀರಾಮ ವನಗಮನ ತಾಳಮದ್ದಳೆ ಜರಗಲಿದೆ. ಆ.27ರಂದು ಭರತಾಗಮನ, ಆ.28ರಂದು ಪಂಚವಟಿ, ಆ.29ರಂದು ವಾಲಿ ಮೋಕ್ಷ, ಆ.30 ರಂದು ಶ್ರಿ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ಚೂಡಾಮಣಿ ,ಆ.31 ರಂದು ಅತಿಕಾಯ ಮೋಕ್ಷ ಸಪ್ತಾಹದ ಕೊನೆಯ ದಿನ ಸೆ.1ರಂದು ಸಂಜೆ 5.30ರಿಂದ ಶ್ರೀರಾಮ ನಿರ್ಯಾಣ ತಾಳಮದ್ದಳೆ ನಡೆಯಲಿದೆ. ಸಪ್ತಾಹದಲ್ಲಿ ಪ್ರಸಿದ್ಧ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ.