ಓಡುವ ನೀರನ್ನು ನಡೆಯುವ ಹಾಗೆ ಮಾಡಿ ,ನಡೆಯುವ ನೀರನ್ನು ತೆವಳುವ ಹಾಗೆ ಮಾಡಿ ,ತೆವಳುವ ನೀರನ್ನು ನಿಲ್ಲುವ ಹಾಗೆ ಮಾಡಿ ,ನಿಂತ ನೀರನ್ನು ಇಂಗಿಸುವುದೇ ಮಳೆ ಕೊಯ್ಲು – ಶ್ರೀ ಪಡ್ರೆ
ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆಯಲ್ಲಿ ನಡೆದ ಮಳೆ- ಜಲ ಮರುಪೂರಣದ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಖ್ಯಾತ ಕೃಷಿಕ ,ಲೇಖಕ ಕರಾವಳಿ ಪ್ರದೇಶಗಳಲ್ಲಿ ‘ರೈನ್ ಮ್ಯಾನ್’ ಎಂದು ಖ್ಯಾತರಾದ ಶ್ರೀ ಪಡ್ರೆ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಜಲ ಮಾಪನ, ತೆರೆದ ಬಾವಿ, ಇಂಗುಗುಂಡಿ, ಕೆರೆಗಳು ಇವುಗಳ ಮಹತ್ವವನ್ನು ತಿಳಿಸಿದರು. ತಮ್ಮ ಅನುಭವ ಹಾಗೂ ಇತರ ನಿದರ್ಶನಗಳನ್ನು ಚಿತ್ರೀಕರಿಸುತ್ತಾ ಜಲ ಮರುಪೂರಣದ ಪ್ರಯೋಜನಗಳನ್ನು ವಿದ್ಯಾರ್ಥಿಗಳಿಗೆ ಅನಾವರಣಗೊಳಿಸಿದರು. ಪ್ರಸ್ತುತ ಜನರಲ್ಲಿ ಕಾಣುವ ನೀರಿನ ಬಗೆಗಿನ ನಿರ್ಲಕ್ಷ್ಯ ಮತ್ತು ಉದಾಸೀನತೆ ಮುಂದಿನ ಪೀಳಿಗೆ ನೀರಿಗಾಗಿಯೂ ಬೆಲೆ ತೆರ ಬೇಕಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ ವಹಿಸಿದರು.ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರ ಪ್ರಭು ಸ್ವಾಗತಿಸಿ,ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್ ಇಯ ಪ್ರಾಂಶುಪಾಲೆ ಮಾಲತಿ. ಡಿ. ವಂದಿಸಿದರು.