ಚಂದ್ರಯಾನ 3 ಯಶಸ್ವಿ– ಸಂಭ್ರವನ್ನು ಆಚರಿಸಿದ ಇಂದ್ರಪ್ರಸ್ಥ ವಿದ್ಯಾಸಂಸ್ಥೆ

0

ಉಪ್ಪಿನಂಗಡಿ: ಚಂದ್ರಯಾನ – 3 ಅಭೂತಪೂರ್ವ ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ದ್ರುವಕ್ಕೆ ಯಶಸ್ವಿಯಾಗಿ ಪಾದಸ್ಪರ್ಶ ಮಾಡಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯರೆಲ್ಲರು ತುಂಬಾ ಹೆಮ್ಮೆ ಪಡುವ ಅಧ್ಬುತ ಕ್ಷಣ. ಈ ಸಂಭ್ರಮವನ್ನು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯಲ್ಲಿ ಆಗಸ್ಟ್ 24 ರಂದು ಆಚರಿಸಲಾಯಿತು.

9ನೇ ತರಗತಿಯ ನಿಹಾಲ್ ಎಚ್ ಶೆಟ್ಟಿ ಚಂದ್ರಯಾನ – 3 ರ ಯಶಸ್ಸಿನ ಹಿಂದಿನ ಪರಿಶ್ರಮವನ್ನು ಅನಾವರಣಗೊಳಿಸಿದರು. ನಂತರ ಮಾತನಾಡಿದ ಭೌತಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸ್ವಾತಿ ಚಂದ್ರಯಾನ – 3 ರ ಕುರಿತ ಸುದೀರ್ಘವಾದ ಮಾಹಿತಿಯನ್ನು ನೀಡುತ್ತಾ ಸೋಲೆ ಗೆಲುವಿನ ಮೆಟ್ಟಿಲು ಎಂಬುದನ್ನು ತಿಳಿಸಿದರು.
ವಿದ್ಯಾರ್ಥಿಗಳೆಲ್ಲರೂ ಭಾರತ ಮಾತೆಗೆ ಜಯಕಾರ ಹಾಕುತ್ತಾ ಹರ್ಷೋಲ್ಲಾಸದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ
ಪ್ರಾಂಶುಪಾಲರಾದ ಶ್ರೀಯುತ ಎಚ್. ಕೆ ಪ್ರಕಾಶ್, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಆರ್ ಪ್ರಸಾದ್, ಉಪನ್ಯಾಸಕರು, ಶಿಕ್ಷಕ – ಶಿಕ್ಷಕೇತರ
ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here