ಜಮೀನಿಗೆ ಅಕ್ರಮ ಪ್ರವೇಶ ಜೀವ ಬೆದರಿಕೆ ದೂರು-ಪ್ರಕರಣ ದಾಖಲು

0

ಪುತೂರು:ಪಾಣಾಜೆಯಲ್ಲಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಬೆದರಿಕೆಯೊಡ್ಡಿರುವ ಆರೋಪದಲ್ಲಿ ದೂರು,ಪ್ರತಿ ದೂರು ದಾಖಲಾಗಿರುವ ಕುರಿತು ವರದಿಯಾಗಿದೆ.
ಕೆದಂಬಾಡಿ ಗ್ರಾಮದ ಕುಂಬ್ರ ಮೆಸ್ಕಾಂ ಎದುರುಗಡೆ ಮನೆಯ ಸತ್ಯನಾರಾಯಣ ಶರ್ಮ ಎಂಬವರ ಪತ್ನಿ ಶ್ರೀಮತಿ ಕೆ.ಸುಮಂಗಲ ಎಂಬವರು ನೀಡಿದ ದೂರಿನಲ್ಲಿ, ಪಾಣಾಜೆ ಗ್ರಾಮದ ಸರ್ವೆ ನಂಬರ್ 352/2 ಹಾಗೂ ಇತರ ಜಮೀನುಗಳನ್ನು ಸುಮಾರು ಒಂದುವರೆ ವರ್ಷಗಳ ಹಿಂದೆ ತಾವು ಖರೀದಿಸಿದ್ದು ಸದ್ರಿ ಜಮೀನನ್ನು ಖರೀದಿಸುವ ಸಮಯ ಗಡಿಗಳಲ್ಲಿ ತಂತಿ ಬೇಲಿ ಅಳವಡಿಸಿದ್ದು ಸದ್ರಿ ತಂತಿ ಬೇಲಿಯು ಜೀರ್ಣಾವಸ್ಥೆಯಲ್ಲಿದ್ದುದರಿಂದ ನಮ್ಮ ಕೃಷಿ ಕೃತ್ಯವಳಿಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸುವ ಸಲುವಾಗಿ ಬೇಲಿಯನ್ನು ದುರಸ್ತಿ ಮಾಡಿ ಕೆಲವು ಭಾಗಗಳಲ್ಲಿ ಬೇಲಿಯ ಬದಲಾಗಿ ಕಾಂಪೌಂಡ್ ನಿರ್ಮಿಸಲು ಆ.15ರಂದು 9 ಗಂಟೆಗೆ ಕೆಲಸದಲ್ಲಿರುವಾಗ, ದಿವಾಕರ್ ಕುಲಾಲ್ ಎಂಬವರು ನಾವು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದು ನೀವು ಇಲ್ಲಿ ತಂತಿ ಬೇಲಿ ರಚಿಸಬಾರದು ನಿಮಗೆ ಈ ಜಮೀನಿನಲ್ಲಿ ಏನು ಹಕ್ಕಿದೆ ಎಂದು ಏರು ಧ್ವನಿಯಲ್ಲಿ ಬೆದರಿಸಿ ತೆರಳಿದ್ದರು.

ಸಂಜೆ ಸುಮಾರು 5:45 ಗಂಟೆ ಸಮಯಕ್ಕೆ ದಿವಾಕರ್ ಕುಲಾಲ್ ಹಾಗೂ ಸುಮಾರು 10 ಜನ ಗುರುತು ಪರಿಚಯ ಇಲ್ಲದವರು ನಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ, ನೀವು ತಂತಿ ಬೇಲಿ ಹಾಕಬಾರದೆಂದು ಹೇಳಿದ್ದರೂ ಏಕೆ ಕೆಲಸ ಮುಂದುವರೆಸಿದ್ದೆಂದು ಕೇಳಿದಾಗ ನಾನು ಮತ್ತು ಗಂಡ ನಾವು ಈ ಜಮೀನನ್ನು ಖರೀದಿಸಿದ್ದು ಸದ್ರಿ ಜಮೀನಿಗೆ ಕಾಡು ಪ್ರಾಣಿಗಳಿಂದ ಕೃಷಿಯನ್ನು ರಕ್ಷಿಸುವ ಸಲುವಾಗಿ ಈ ಹಿಂದೆ ತಂತಿ ಬೇಲಿಯ ಬದಲಾಗಿ ಕಾಂಪೌಂಡ್ ನಿರ್ಮಾಣ ಮಾಡುವ ಯೋಚನೆ ಮಾಡಿರುತ್ತೇವೆ ಎಂದು ಹೇಳಿದ್ದೆವು.ನೀವು ಈ ಜಮೀನಿಗೆ ಹೇಗೆ ಬರುತ್ತೀರೆಂದು ಯಾವ ರೀತಿ ಕೆಲಸ ಮಾಡುತ್ತಿರೆಂದು ದಿವಾಕರ್ ಕುಲಾಲ್‍ರವರು ಜೀವ ಬೆದರಿಕೆ ಮಾಡಿ ಆ.21ರಂದು ಜಮೀನಿಗೆ ಅಕ್ರಮ ಪ್ರವೇಶ ಮಾಡಿ 40 ತಂತಿ ಬೇಲಿಯ ಕಂಬಗಳನ್ನು ಕಿತ್ತು ಕೆಡವಿರುವುದಾಗಿದೆ.ಇದರಿಂದ ಸುಮಾರು 15,000 ರೂ.ನಷ್ಟ ಉಂಟಾಗಿರುತ್ತದೆ¿ ಎಂದು ತಿಳಿಸಿದ್ದಾರೆ.ಕಲಂ 143 147 447 506 427 R/W 149 ಐಪಿಸಿ ಅಡಿ ಪ್ರಕರಣ ದಾಖಲಾಗಿರುತ್ತದೆ.

ಪಾಣಾಜೆ ಗ್ರಾಮದ ವೆಂಕಟರಮಣ ಭಟ್ ಅವರು ದೂರು ನೀಡಿ, ನಮ್ಮ ಜಾಗದಲ್ಲಿ ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿದ್ದ ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ಆ.17ರಂದು ಸಂಜೆ ಪೂಜೆ ಮಾಡುತ್ತಿರುವಾಗ ನೆರೆಯ ಜಾಗದ ಮಾಲಕ ಸತ್ಯನಾರಾಯಣ ಶರ್ಮ ಎಂಬವರು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿ, ಜಾಗದ ಬೇಲಿಯನ್ನು ಕೆಡವಿ ಸುಮಾರು ರೂ.500 ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here