ನೆಲ್ಯಾಡಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಗ್ರಾಮ ಸಮಿತಿ ನೆಲ್ಯಾಡಿ ಇದರ ವಿಶೇಷ ಮಾಸಿಕ ಸಭೆಯು ನೆಲ್ಯಾಡಿಯ ಬಿರ್ವ ಸಭಾಭವನದಲ್ಲಿ ನಡೆಯಿತು.
ಪುತ್ತೂರು ಬಿಲ್ಲವ ಸಂಘದ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುವ ಗುರುಜಯಂತಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಈ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜ ಬಾಂಧವರೆಲ್ಲರೂ ಪ್ರತಿ ಮನೆಯಿಂದಲೂ ಗುರುಪೂಜೆ ಮಾಡುವಂತೆ ಹಾಗೂ ಇದಕ್ಕೆ ಎಲ್ಲರೂ ಸಹಕರಿಸುವಂತೆ ನಿರ್ಣಯಿಸಲಾಯಿತು.
ನೂತನ ಗ್ರಾಮ ಸಮಿತಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು, ನೂತನ ಅಧ್ಯಕ್ಷ ಮೋಹನ್ ಕುಮಾರ್ ದೊಂತಿಲ, ಕಾರ್ಯದರ್ಶಿ ಜನಾರ್ದನ ಬಾಣಜಾಲು, ಉಪಾಧ್ಯಕ್ಷ ಲಿತಿನ್ ಕುಮಾರ್ ಕೊಣಾಲು, ಕೋಶಾಧಿಕಾರಿ ಲೋಕೇಶ್ ಬಾಣಜಾಲು, ಜೊತೆಕಾರ್ಯದರ್ಶಿ ನೋಣಯ್ಯ ಅಂಬರ್ಜೆಯವರಿಗೆ ಡಾ.ಸದಾನಂದ ಕುಂದರ್ರವರು ಅಧಿಕಾರ ಹಸ್ತಾಂತರ ಮಾಡಿದರು. ನೂತನ ಮಹಿಳಾ ಘಟಕದ ಅಧ್ಯಕ್ಷೆ ದೀಕ್ಷಾ ಸಾಲಿಯಾನ್, ಉಪಾಧ್ಯಕ್ಷೆ ಲೀಲಾವತಿ ಪರಂತಮೂಲೆ, ಕಾರ್ಯದರ್ಶಿ ಪದ್ಮಾವತಿ, ಕೋಶಾಧಿಕಾರಿ ಉಷಾ ಕೊಣಾಲು, ಜೊತೆ ಕಾರ್ಯದರ್ಶಿ ಅನಿತಾ ಕೊಣಾಲುರವರಿಗೆ ನೂತನ ಅಧ್ಯಕ್ಷ ಮೋಹನ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು. ಪುತ್ತೂರು ಬಿಲ್ಲವ ಸಂಘದಲ್ಲಿ ನಡೆಯುವ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಸಮಾಜ ಭಾಂದವರೆಲ್ಲರೂ ಪಾಲ್ಗೊಳ್ಳಬೇಕೆಂದು ಮಹಿಳಾ ಘಟಕದ ಅಧ್ಯಕ್ಷೆ ದೀಕ್ಷಾ ಸಾಲಿಯನ್ ಮತ್ತು ಉಷಾ ಅಂಚನ್ರವರು ಕೇಳಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಮೋಹನ್ ಕುಮಾರ್ರವರು ಮುಂದಿನ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಕೇಳಿಕೊಂಡರು. ಸಂಘದ ಅಧ್ಯಕ್ಷ ಡಾ.ಸದಾನಂದ ಕುಂದರ್ ಸ್ವಾಗತಿಸಿದರು. ಕೋಶಾಧಿಕಾರಿ ಲೋಕೇಶ್ ಬಾಣಜಾಲು ಲೆಕ್ಕಪತ್ರ ಮಂಡಿಸಿದರು. ಚಂದ್ರಶೇಖರ ಬಿ, ಸುಂದರ ಬಿ, ತುಳಸಿಧರನ್, ಮಹೇಶ್ ಬಿ, ನವೀನ್ ಪೋಸೋಳಿಗೆ, ಸುದೀಶ್, ಶಿವರಾಜ್, ಸುಬ್ರಮಣ್ಯ, ಪದ್ಮಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಜನಾರ್ದನ ಬಿ., ವರದಿ ವಾಚಿಸಿ ಕೊನೆಯಲ್ಲಿ ವಂದಿಸಿದರು.