ಪುತ್ತೂರು:”Google family link “ನ ಮೂಲಕ ಮಗುವಿನ ಮೊಬೈಲ್ ಪರದೆಯ ಸಮಯವನ್ನು ನಿರ್ವಹಿಸುವ ವಿಷಯದ ಕುರಿತು ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಪೋಷಕರಿಗಾಗಿ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಲ್ ಆಂಡ್ ಟಿ ಇನ್ಫೋಟೆಕ್ ಮೈಂಡ್ ಟ್ರೀ ನಿರ್ದೇಶಕ ಕೃಷ್ಣಮೂರ್ತಿ ಪಿ. ಎಸ್ ರವರು, ಪೋಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ನಡೆಸಿ, Orientation ಎಂಬ ಆಪ್ ನ ಮೂಲಕ ಮಗುವನ್ನು ಮೇಲ್ವಿಚಾರಣೆ ಮಾಡುವ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಅತಿಥಿ ಅಕ್ಷತಾ ಶೆಣೈ, ಶಾಲಾ ಸಂಚಾಲಕ ಭರತ್ ಪೈ, ಪ್ರಾಂಶುಪಾಲೆ ಸಿಂಧು ವಿ. ಜಿ. ಉಪಸ್ಥಿತರಿದ್ದರು. ಉಪ ಪ್ರಾಂಶುಪಾಲೆ ಹೇಮಾವತಿ ಎಂ. ಎಸ್. ಸ್ವಾಗತಿಸಿದರು. ಶಿಕ್ಷಕಿ ಸಾಯಿಗೀತಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.