ಪುತ್ತೂರಿನ ಟೋಪ್ಕೋ ಝಂ ಝಂ ಜ್ಯುವೆಲ್ಲರಿಯಲ್ಲಿ ಮಾಸಿಕ ಉಳಿತಾಯ ಯೋಜನೆಯ ಡ್ರಾ

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿರುವ ಟೋಪ್ಕೋ ಝಂ ಝಂ ಜ್ಯುವೆಲ್ಲರಿಯಲ್ಲಿ ಗ್ರಾಹಕರ ಮಾಸಿಕ ಉಳಿತಾಯ ಯೋಜನೆಯ ಡ್ರಾ ಕಾರ್ಯಕ್ರಮ ನಡೆಯಿತು. ಬಂಪರ್ ಬಹುಮಾನ ವಾಷಿಂಗ್ ಮೆಷೀನ್ ಅನ್ನು ಝೈನ್ ಮಾಲಿಕ್ ನರಿಮೊಗರುರವರು ವಿಜೇತರಾದರು. ಎರಡನೇ ಬಹುಮಾನವನ್ನು ಅಶ್ರಿಫಾ ಪೆರ್ಲ ವಿಜೇತರಾದರು.

ಡ್ರಾದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಗ್ರಾಹಕರ ಪೈಕಿ ಇಶಾಕ್, ಆಯಿಷ ನಝ್ಮ, ಝಕಿಯಾ, ಸಾಯಿದಾ ರಝಾಕ್, ಮುಸ್ತಫ, ಮೊಹದ್ ಹೈಜಿನ್, ಅಸ್ಮ, ಫಾತಿಮಾ ಅಫ್ರಾರವರು ಲಕ್ಕಿ ಡ್ರಾದ ಮೂಲಕ ಆಕರ್ಷಕ ಬಹುಮಾನವನ್ನು ಪಡೆದುಕೊಂಡರು. ಮಾಸಿಕ ಕನಿಷ್ಟ ಐನೂರು ರೂಪಾಯಿಯಿಂದ ಆರಂಭವಾಗುವ ಈ ಸ್ತ್ರೀಂಗೆ ಒಂದು ವರ್ಷದ ವರೆಗೆ ಪ್ರತಿ ತಿಂಗಳು ಹಣ ಪಾವತಿ ಮಾಡಬೇಕಾಗಿದೆ.

ಡ್ರಾ ಸಮಾರಂಭದಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರಕ್ಟರ್ ಮುಹಮ್ಮದ್ ಟಿ.ಕೆ, ಸಂಸ್ಥೆಯ ಸಿಬ್ಬಂದಿಗಳಾದ ಅನಸ್ , ಅಬ್ದುಲ್ ಅಝೀಝ್ ಸಂಶುದ್ದೀನ್, ಅಫ್ರೀದ್, ಗೋಪಾಲ್ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. ಅಝೀಝ್ ಕೆಮ್ಮಾಯಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here