ಸೌಜನ್ಯ ಪ್ರಕರಣ- ಪುತ್ತೂರಿನಲ್ಲಿ ಅಭಿನವ ಭಾರತ ಮಿತ್ರ ಮಂಡಳಿ, ಪ್ರಜಾಪ್ರಭುತ್ವ ವೇದಿಕೆಯಿಂದ ಜನಜಾಗೃತಿ ಮೆರವಣೆಗೆ

0

ಪುತ್ತೂರು: 11 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದ ಕು.ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆಯನ್ನು ಖಂಂಡಿಸುವ ಮೂಲಕ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಪ್ರಕರಣವನ್ನು ಮರುತನಿಖೆ ಮಾಡಬೇಕು ಮತ್ತು ನಿರ್ದೋಷಿ ಸಂತೋಷ್ ರಾವ್ ಅವರಿಗಾದ ನಷ್ಟವನ್ನು ಭರಿಸಿ ಪರಿಹಾರಕ್ಕಾಗಿ ಆಗ್ರಹಿಸಿ ಪುತ್ತೂರಿನಲ್ಲಿ ಅಭಿನವ ಭಾರತ ಮಿತ್ರ ಮಂಡಳಿ ಪುತ್ತೂರು ಮತ್ತು ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ದರ್ಬೆಯಿಂದ ಮೆರವಣೆಗೆ ನಡೆಯಿತು.

ನಿರೀಕ್ಷಣಾ ಮಂದಿರ ಬಳಿಯಿಂದ ಸಂತ ಫಿಲೋಮಿನಾ ಕಾಲೇಜು ತನಕದ ರಸ್ತೆಯು ಒಂದು ಬದಿಯಲ್ಲಿ ಸೇರಿ ಅಲ್ಲಿಂದ ದರ್ಬೆ ವೃತ್ತಕ್ಕೆ ಬಂದು ಮೆರವಣಿಗೆ ಆರಂಭಂಗೊಂಡಿತು. ಹಿಂದೂ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಸಹಿತ ಅನೇಕರು ಸೌಜನ್ಯ ಪರವಾಗಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ದರ್ಬೆಯಿಂದ ಬಸ್‌ನಿಲ್ದಾಣದ ಬಳಿಯಿಂದ ಮುಖ್ಯರಸ್ತೆಯಾಗಿ ಪ್ರಧಾನ ಅಂಚೆ ಕಚೇರಿಯ ಬಳಿಯಿಂದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಾಗಿತು. ಮೆರವಣಿಗೆಯ ನಂತರ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಅವರಣದಲ್ಲಿ ಜನಜಾಗೃತಿ ಸಭೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here