ಪುತ್ತೂರು: ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಸಂತ ಮೀರಾ ಆಂಗ್ಲ ಮಾಧ್ಯಮ ಶಾಲೆ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ದುರ್ಗಾಪ್ರಸಾದ್( ವಿಶ್ವನಾಥ ನಾಯ್ಕ ಮತ್ತು ಲೀಲಾವತಿ ದಂಪತಿಗಳ ಪುತ್ರ), ರಿತೇಶ್ (ರಾಜೇಶ್ ನಾಯಕ್ ಮತ್ತು ಸಂಧ್ಯಾ ನಾಯಕ್ ದಂಪತಿಗಳ ಪುತ್ರ) , ಸ್ಕಂದ ಬಳ್ಳಕ್ಕುರಾಯ (ಸುಬ್ರಹ್ಮಣ್ಯ ಬಳ್ಳಕ್ಕುರಾಯ ಮತ್ತು ಸ್ಮೀತಾ ದಂಪತಿಗಳ ಪುತ್ರ)ಇವರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ನಿಡ್ವಣ್ಣಾಯ (ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ), ಸಾಧನಾ( ಚಂದ್ರಶೇಖರ ಮತ್ತು ಅಮುದಾ ದಂಪತಿಗಳ ಪುತ್ರಿ)ಗುಂಪು ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಕೀರ್ತಿ ಕುಲಾಲ್ ಪ್ರೌಢ ಶಾಲಾ ಬಾಲಕರ ವಿಭಾಗದ ರಿದಮಿಕ್ ಯೋಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಪ್ರಜ್ಞಾ ನಿಡ್ವಣ್ಣಾಯ (ರಾಮಗೋಪಾಲ ನೂಜಾಜೆ ಮತ್ತು ಪೂರ್ಣಿಮಾ ನೂಜಾಜೆ ದಂಪತಿಗಳ ಪುತ್ರಿ), ಸಾಧನಾ (ಚಂದ್ರಶೇಖರ ಮತ್ತು ಅಮುದಾ ದಂಪತಿಗಳ ಪುತ್ರಿ) ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ನಿಶಾಂತ್ (ಚಂದ್ರಶೇಖರ ಮತ್ತು ಸವಿತಾ ದಂಪತಿಗಳ ಪುತ್ರ), ಕರಣ್ಗೌಡ(ಫಕೀರಗೌಡ ಮತ್ತು ಗುಲಾಬಿ ದಂಪತಿಗಳ ಪುತ್ರ) ಅತ್ಯುತ್ತಮ ಪ್ರದರ್ಶನ ನೀಡಿರುತ್ತಾರೆ. ಇವರಿಗೆ ಶಾಲಾ ಯೋಗಶಿಕ್ಷಕರಾದ ರಂಗಪ್ಪ ಮತ್ತು ಅನುರಾಧ ತರಬೇತಿ
ನೀಡಿರುತ್ತಾರೆ.