ನಿವ್ವಳ ಲಾಭ ರೂ. 1,11,715ಲಕ್ಷ,- ಪ್ರತೀ ಲೀ.ಗೆ 34 ಪೈಸೆ ಬೋನಸ್
ಪುತ್ತೂರು : ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಆ.28ರಂದು ಬೆಳಿಗ್ಗೆ 10.30ರಿಂದ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘದ ಮಾಜಿ ಅಧ್ಯಕ್ಷರುಗಳಾದ ವೆಂಕಟರಾವ್ ಮತ್ತು ರಂಗನಾಥ ರೈ ಗುತ್ತುರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ 2022-23ನೇ ಸಾಲಿನ ವಾರ್ಷಿಕ ವರದಿ, ಲಾಭ ವಿಲೇವಾರಿ ವರದಿ, 2023-24ನೇ ಸಾಲಿನ ಅಂದಾಜು ಆಯವ್ಯಯ ವರದಿ ವಾಚಿಸಿದರು. ಸಂಘವು 2022-23ನೇ ಸಾಲಿನಲ್ಲಿ ರೂ.1,11,715.02 ಲಾಭ ಗಳಿಸಿದೆ. ಸದಸ್ಯರಿಗೆ ಪ್ರತೀ ಲಿ. ಹಾಲಿಗೆ 34 ಪೈಸೆ ಬೋನಸ್ ನೀಡಲಾಗುವುದು ಎಂದರು.
ದ. ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿರವರು 2022-23ನೇ ಸಾಲಿನ ಲೆಕ್ಕಪರಿಶೋಧನಾ ವರದಿ ಮಂಡಿಸಿದರು ಬಳಿಕ ಮಾತನಾಡಿ ಕೃಷಿಗೆ ಪೂರಕವಾಗಿ ಹೈನುಗಾರಿಕೆ ಮಾಡಲಾಗುತ್ತದೆ. ಹಾಲು ಉತ್ಪದಕರೆಲ್ಲರೂ ನಂದಿನಿ ಪಶು ಆಹಾರ ಉಪಯೋಗಿಸಿ ಇದರಿಂದ ಸಂಘಕ್ಕೂ ಲಾಭದಾಯಕವಾಗುತ್ತದೆ. ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸಿ. ಹಾಲಿನ ಪಾತ್ರೆ ಸ್ವಚ್ಛವಾಗಿರಿಸಿಕೊಳ್ಳಿ ಎಂದು ಹೇಳಿದರು.
ಒಕ್ಕೂಟದದಿಂದ ದೊರೆಯುವ ಮಿನಿ ಡೈರಿ ಯೋಜನೆ, ಹಾಲು ಕರೆಯುವ ಯಂತ್ರ, ಸ್ಲರಿ ಪಂಪ್, ಗೋಬರ್ ಗ್ಯಾಸ್, ಅಜೋಳ, ರಬ್ಬರ್ ಮ್ಯಾಟ್ ಯೋಜನೆಗಳ ಮಾಹಿತಿ ನೀಡಿ ಈ ಸಂಘವು ಮಾದರಿ ಸಂಘವಾಗಲಿ ಎಂದರು.
ದ. ಕ. ಹಾಲು ಒಕ್ಕೂಟದ ಪಶು ವೈದ್ಯಾಧಿಕಾರಿ ಡಾ. ಅನುದೀಪ್ ಮಾತನಾಡಿ ಪಶುಗಳ ಕಾಲು ಬಾಯಿ ರೋಗ ಮತ್ತು ಚರ್ಮ ಗಂಟು ರೋಗದ ಮಾಹಿತಿ ನೀಡಿ ಬೈಹುಲ್ಲು ಪಶು ಆಹಾರಗಳನ್ನು ಕೇರಳದಿಂದ ಪೂರೈಕೆ ಮಾಡಿಕೊಳ್ಳಬೇಡಿ. ಪುತ್ತೂರು ವ್ಯಾಪ್ತಿಯಲ್ಲಿ 40 ರಿಂದ 50ರಷ್ಟು ಪಶುಗಳಿಗೆ ರೋಗ ಲಕ್ಷಣಗಳು ಕಂಡು ಬಂದಿದೆ. ಪಶುಗಳಿಗೆ ವ್ಯಾಕ್ಸಿನೆಷನ್ ಮಾಡಿಸಿಕೊಳ್ಳಿ ಯಾವುದೇ ಭಯ ಬೇಡ ಎಂದರು.
ಹೆಣ್ಣು ಕರು ಸಾಕಾಣಿಕೆ, ದನಗಳಿಗೆ ವಿಮೆ ಮಾಹಿತಿ ನೀಡಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕರುಣಾಕರ್ ಶೆಟ್ಟಿ ಕೊಮ್ಮಂಡ ಮಾತನಾಡಿ ಪಶು ಮತ್ತು ಮನುಷ್ಯರಿಗೆ ಭಾವನಾತ್ಮಕ ಸಂಭಂದ ಇದೆ. ಕೃಷಿಗೂ ಹೈನುಗಾರಿಕೆ ಬೇಕು ದನಗಳನ್ನು ಆದಷ್ಟು ಹೆಚ್ಚು ಸಾಕಬೇಕು. ದನಗಳ ಸಾಕಾಣಿಕೆಯಿಂದ ಮಾನಸಿಕ ನೆಮ್ಮದಿಯು ದೊರಕುತ್ತದೆ. ಸದಸ್ಯರು ಹೆಚ್ಚು ಹಾಲಿನ ಪೂರೈಕೆ ಮಾಡಿ ಸಂಘದ ಅಭಿವೃದ್ಧಿಗೆ ಸಹಕರಿಸಿ ಎಂದರು.
ಬೆಟ್ಟಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸಂಘದ ನಿರ್ದೇಶಕರಾದ ಎಂ.ಶೇಷಪ್ಪ ರೈ, ಸದಾನಂದ ರೈ, ಆನಂದ ಗೌಡ, ಪ್ರಭಾಕರ ರೈ, ಪ್ರಮೋದ್ ಕುಮಾರ್ ರೈ, ದೇವಕಿ ದೇವಿ, ಕುಸುಮ ಎಸ್.ಎಂ., ಕೇಶವ ನಾಯ್ಕ, ಜಯಂತಿ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಅನಿತಾ ಕೂವೆಂಜ ಪ್ರಾರ್ಥಿಸಿದರು.ನಿರ್ದೇಶಕ ಶರತ್ ಕುಮಾರ್ ಪಾರ ವಂದಿಸಿದರು. ಸಿಬಂದಿಗಳಾದ ಕುಂಞಿಕೃಷ್ಣ ಮಣಿಯಾಣಿ, ಉಚಿತ್ ಕುಮಾರ್ ಸಹಕರಿಸಿದರು
ಅತೀ ಹೆಚ್ಚು ಹಾಲು ಪೂರೈಕೆಗೆ ಬಹುಮಾನ 2022-23ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಆನಂದ ಗೌಡ ಮಿತ್ತಡ್ಕರವರಿಗೆ ಪ್ರಥಮ ಬಹುಮಾನ, ಸರಸ್ವತಿ ರೈ ಬಾಳ್ಯೊಟ್ಟುರವರಿಗೆ ದ್ವಿತೀಯ ಬಹುಮಾನ ಹಾಗೂ ಸಂಜೀವ ರೈ ಮಡ್ಯಂಪಾಡಿರವರಿಗೆ ತೃತೀಯ ಬಹುಮಾನ ನೀಡಲಾಯಿತು. 200 ಲೀ.ಗಿಂತ ಮಿಕ್ಕಿ ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು