348 ಕೋಟಿ ವ್ಯವಹಾರ, ರೂ.1.55ಕೋಟಿ ಲಾಭ, ಶೇ.16 ಡಿವಿಡೆಂಡ್
ಪುತ್ತೂರು:ಸುಧೀರ್ಘ 65 ವರ್ಷಗಳ ಇತಿಹಾಸವಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 348 ಕೋಟಿಗಳ ವ್ಯವಹಾರ ನಡೆಸಿ ರೂ.1,55,75,255.65 ಲಾಭಗಳಿಸಿದೆ. ಸದಸ್ಯರಿಗೆ ಶೇ.16 ಡಿವಿಡೆಂಡ್ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿರವರು ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ವಾರ್ಷಿಕ ಮಹಾಸಭೆಯು ಆ.27ರಂದು ಪುರಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಂಘದಲ್ಲಿ ವರ್ಷಾಂತ್ಯಕ್ಕೆ 5055 ಎ ತಗರತಿ ಸದಸ್ಯರಿಂದ ರೂ.3,17,74,022 ಹಾಗೂ 28,837 ಡಿ ತರಗತಿ ಸದಸ್ಯರಿಂದ ರೂ.20,14,465 ಪಾಲು ಬಂಡವಾಳ, ರೂ.2,70,64,946.42 ಕ್ಷೇಮ ನಿಧಿ, ರೂ.2,11,52,767.92 ಇತರ ನಿಧಿಗಳು, ರೂ.754578826.50 ಠೇವಣಾತಿಯನ್ನು ಹೊಂದಿದೆ. ಠೇವಣಾತಿ ಸಂಗ್ರಹದಲ್ಲಿ ಶೇ.27.32 ಪ್ರಗತಿ ಸಾಧಿಸಿದೆ.
ವರದಿ ವರ್ಷದಲ್ಲಿ ರೂ. 60,84,69,155 ಸಾಲವನ್ನು ವಿವಿಧ ರೂಪದಲ್ಲಿ ವಿತರಿಸಲಾಗಿದ್ದು ಇದರಲ್ಲಿ ರೂ.62,47,69,361.80 ಹೊರಬಾಕಿಯಿರುತ್ತದೆ. ರೂ.3,37,82,450 ಸಾಲ ಸುಸ್ತಿಯಾಗಿರುತ್ತದೆ. ರೂ.2.83.09.648.10ಕ್ಷೇಮ ನಿಧಿ, ವಿವಿಧ ಬ್ಯಾಂಕ್‌ಗಳಲ್ಲಿ ರೂ.22,26,20,040 ಹಾಗೂ ರೂ.69,000ಪಾಲು ಬಂಡವಾಳಗಳಲ್ಲಿ ವಿನಿಯೋಗಿಸಲಾಗಿದೆ. ಠೇವಣಿ ಹಾಗೂ ಪಾಲು ಬಂಡವಾಳಗಳಿಂದ ಒಟ್ಟು ರೂ.2,01,19,762 ಬಡ್ಡಿ ಆದಾಯ ಬಂದಿರುತ್ತದೆ. ವರದಿ ವರ್ಷದಲ್ಲಿ ರೂ.16,41,689.82 ಮೌಲ್ಯದ ಕುಂಬಾರಿಕಾ ಉತ್ಪನ್ನ ಖರೀಸಿ ಮಾಡಿದ್ದು ಇದರ ವ್ಯಾಪಾರದಿಂದ ರೂ.16,23,040 ಲಾಭ ಬಂದಿರುತ್ತದೆ. ಸಂಘವು ಲೆಕ್ಕ ಪರಿಶೋಧನೆಯಲ್ಲಿ ಎ ಶ್ರೇಣಿ ಹಾಗೂ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಸತತ ಮೂರನೇ ಬಾರಿಗೆ ವಿಶೇಷ ಸಾಧನಾ ಪ್ರಶಸ್ತಿ ನೀಡಿದ ಗೌರವಿಸಿದೆ. ಲಾಭಾಂಶವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ಮುಂದಿನ ಯೋಜನೆಗಳು:
ಕುಂಬಾರಿಕಾ ಕೈಗಾರಿಕೆಯ ಬಗ್ಗೆ ಕೂಶಲ ಕರ್ಮಿಗಳಿಗೆ ವಿಶೇಷ ತರಬೇತಿ ನೀಡುವುದು, ಕುಂಬಾರಿಕೆ ಮಾರುಕಟ್ಟೆ ಅಭಿವೃದ್ಧೀ ಪಡಿಸುವುದು, ಸದಸ್ಯರ ಅನುಕೂಲಕ್ಕಾಗಿ ಆರೋಗ್ಯ ಶಿಬಿರವನ್ನು ಆಯೋಜಿಸುವುದು, ವೃತ್ತಿ ನಿರತ ಕುಂಬಾರ ಕುಶಲ ಕರ್ಮಿಗಳಿಗೆ ಶೇ.೯ ಬಡ್ಡಿದರದಲ್ಲಿ ಸಾಲ ನೀಡುವುದು, ಆಸಕ್ತರಿಗೆ ನಿರಂತರ ಉಚಿತ ತರಬೇತಿ ನೀಡುವುದು. ವಿಟ್ಲ ಶಾಖೆಗೆ ಹೋಸ ಕೋಣೆ ಖರೀದಿಸಿ ಸ್ಥಳಾಂತರಿಸುವುದು, ಬೆಳ್ಳಾರೆ ಶಾಖೆಗೆ ಜಮೀನು ಖರೀದಿಸಿ ಕಟ್ಟಡ ರಚಿಸಿ ಅಲ್ಲಿಗೆ ಶಾಖೆ ಸ್ಥಳಾಂತರಿಸುವುದು, ಕುಂಬಾರಿಕ ಉತ್ಪನ್ನಗಳ ಸಂಚಾರಿ ಮಾರಾಟಕ್ಕೆ ವಾಹನ ಖರೀದಿಸುವುದು ಹಾಗೂ ಮಂಗಳೂರು, ಹಾಸನ, ಕಡಬ, ಸುಳ್ಯ ಮತ್ತು ಸಕಲೇಶಪುರದಲ್ಲಿ ಶಾಖೆಗಳನ್ನು ತೆರೆಯುವ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ ತಿಳಿಸಿದರು.
ಸಂಘದಲ್ಲಿ ಮುಂದಿನ ದಿನಗಳಲ್ಲಿ ರೂ.100 ಕೋಟಿ ಠೇವಣಿ ಸಂಗ್ರಹದ ಗುರಿಯಿದೆ. ಕುಂಬಾರಿಕಾ ಗಡಿಕೈಗಾರಿಕಾ ಅಭಿವೃದ್ಧಿ ಯೋಜನೆಯಲ್ಲಿ ರೂ.೫ಕೋಟಿ ಅನುದಾನಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುತ್ತಿದ್ದು ಇದರ ಅನುಷ್ಠಾನಕ್ಕೆ ಸದಸ್ಯರು ಸಹಕರಿಸಬೇಕು. ಸಿಬಂದಿಗಳ ತುಟ್ಟಿ ಭತ್ಯೆಯನ್ನು ಶೇ.20ರಷ್ಟು ಏರಿಕೆ ಮಾಡಲಾಗಿದೆ. ಪಿಗ್ಮಿ ಸಂಗ್ರಾಹಕರಿಗೆ ಶೇ.9ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ವರಮಹಾಲಕ್ಷ್ಮೀ ಪೂಜೆಯಿಂದ ವಿಜಯದಶಮಿ ತನಕದ ಠೇವಣಿಗಳಿಗೆ ಶೇ.10 ವಿಶೇಷ ಬಡ್ಡಿ ನೀಡಲಾಗವುದು. ವೃತ್ತಿ ನಿರತ ಕುಶಲ ಕರ್ಮಿಗಳಿಗೆ ರೂ.500 ಮಾಸಿಕ ಪಿಂಚಣಿ ನೀಡುವುದು, ಎಸ್‌ಎಸ್‌ಎಲ್‌ಸಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ವಿತರಿಸಲಾಗುವುದು ಹಾಗೂ ಪುತ್ತೂರಿನ ಕುಲಾಲ ಸಂಘಕ್ಕೆ ನಿವೇಶನ ಖರೀದಿಗೆ ರೂ.೫ಲಕ್ಷ ದೇಣಿಗೆ ನೀಡಲಾಗುವುದು ಎಂದು ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ತಿಳಿಸಿದರು.
ಉಪಾಧ್ಯಕ್ಷ ದಾಮೋದರ ವಿ., ನಿರ್ದೇಶಕರಾದ ಬಿ.ಎಸ್ ಕುಲಾಲ್, ಗಣೇಶ್ ಪಿ., ಶಿವಪ್ಪ ಮೂಲ್ಯ, ಎಚ್.ಪದ್ಮಕುಮಾರ್, ಸೇಸಪ್ಪ ಕುಲಾಲ್, ನಾಗೇಶ್ ಕುಲಾಲ್, ಪ್ರಶಾಂತ್ ಬಂಜನ್, ಜಯಶ್ರೀ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಧಾರ್ಮಿಕ ಮುಖಂಡ ಪ್ರೇಮಾನಂದ ಕುಲಾಲ್ ಕೋಡಿಕ್ಕಲ್, ಮಂಗಳೂರಿನ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರಿಕಾಕ್ಷ ಯು.ಮೂಲ್ಯ, ಬೆಳ್ತಂಗಡಿ ಮೂಲ್ಯರ ಯಾನೆ ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸೋಮಯ್ಯ ಅನೈನಡೆ, ಬಂಟ್ವಾಳ ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಸತೀಶ್ ಜಕ್ರಿಬೆಟ್ಟು, ಜಲತಜ್ಞ ನಾರಾಯಣ ಮೂಲ್ಯ ಕಾವು, ಕುಂಬಾರಿಕೆ ಉದ್ಯಮಿ ಸಂಜೀವ ಕುಲಾಲ್ ಉಜಿರೆಯವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಪ್ರಜ್ಞಾ ಜೆ.ಎಸ್., ನಿಶಾ ಹಾಗೂ ಭವಿಷ್‌ರವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಭಾ ಕಾರ್ಯಕ್ರಮದ ಪ್ರಾರಂಭದಲ್ಲಿ ಕುಂಬಾರಿಕೆಯ ಪ್ರಾತ್ಯಾಕ್ಷಿಕೆ ನಡೆಯಿತು. ಸಿಬಂದಿ ದೀಪಕ್ ಕುಮಾರ್ ಪ್ರಾರ್ಥಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್ ಜನಾರ್ದನ ಮೂಲ್ಯ ಸ್ವಾಗತಿಸಿದರು. ನವೀನ್ ಕುಲಾಲ್ ಹಾಗೂ ಪ್ರವೀಣ್ ಬಸ್ತಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಶುಭಾ ಎ. ಬಂಜನ್ ವಂದಿಸಿದರು. ಸಿಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆದು ವಿಜಯ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ `ಶಿವದೂತ ಗುಳಿಗ’ ನಾಟಕ ಪ್ರದರ್ಶನ ನಡೆಯಿತು.