ಶ್ರೀ ರಾಮಕೃಷ್ಣ ಸೊಸೈಟಿಯ 29ನೇ ವಾರ್ಷಿಕ ಮಹಾಸಭೆ

0

ರೂ. 9.84 ಕೋಟಿ ಲಾಭ, ಶೇ. 25 ಡಿವಿಡೆಂಡ್-ಕೆ. ಜೈರಾಜ್ ಬಿ. ರೈ
ಪುತ್ತೂರು: ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 29ನೇ ವಾರ್ಷಿಕ ಮಹಾಸಭೆ, ಸ೦ಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರ ಅಧ್ಯಕ್ಷತೆಯಲ್ಲಿ ಮ೦ಗಳೂರಿನ ಉರ್ವ ಸೆ೦ಟನರಿ ಚರ್ಚ್ ಹಾಲ್‌ನಲ್ಲಿ ಆ.27ರಂದು ನಡೆಯಿತು.
ಸ೦ಘವು 31.೦3.2023ಕ್ಕೆ ಅ೦ತ್ಯವಾದ,2022-23ನೇ ಸಾಲಿನಲ್ಲಿ ರೂ.9.84ಕೋಟಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.25 ಡಿವಿಡೆ೦ಡ್‌ನ್ನು ನೀಡಲು ಮಹಾಸಭೆಯಲ್ಲಿ ನಿರ್ಧರಿಸಿದೆ. 2022-23ನೇ ಸಾಲಿನ ಆಡಳಿತ ಮಂಡಳಿಯ ವರದಿ ಮತ್ತು ಕಾರ್ಯಯೋಜನೆಗಳನ್ನು ಮಂಡಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು, ಠೇವಣಾತಿ ಮತ್ತು ಸಾಲ ಸೇರಿದಂತೆ ಒಟ್ಟು ಸಾರ್ವಕಾಲಿಕ ದಾಖಲೆಯ ರೂ.145 ಕೋಟಿ ವೃದ್ಧಿಯನ್ನು ದಾಖಲಿಸಿ, 31/೦3/2023ಕ್ಕೆ ರೂ.453 ಕೋಟಿ ಠೇವಣಾತಿ, ರೂ.382 ಕೋಟಿಸಾಲ, ರೂ.835 ಕೋಟಿ ಮೀರಿದ ಒಟ್ಟು ವ್ಯವಹಾರ, ರೂ.9.84 ಕೋಟಿ ನಿವ್ವಳ ಲಾಭ ಹಾಗೂರೂ. 3೦89 ಕೋಟಿ ಒಟ್ಟು ವಹಿವಾಟನ್ನು ಸಾಧಿಸಿದೆ. ಸಂಘದ ಸಾಧನೆಯ ಪ್ರಮುಖ ಮತ್ತೊಂದು ಅಂಶವೆಂದರೆ ಒಟ್ಟು ಅನುತ್ಪಾದಕ ಆಸ್ತಿಯು ಹೊರಬಾಕಿ ಸಾಲದ ಶೇ. ೦.೦8ಗೆ ಸೀಮಿತವಾಗಿದ್ದು, ಕಳೆದ 16 ವರ್ಷಗಳಿಂದ ನಿವ್ವಳ ಅನುತ್ಪಾದಕ ಆಸ್ತಿಯು ಶೂನ್ಯ ಪ್ರಮಾಣದಲ್ಲಿದೆ ಎಂದರು.
ಸಂಘದ ಕೇಂದ್ರ ಕಛೇರಿ ಕಟ್ಟಡದ ನಿರ್ಮಾಣ ಕಾರ್ಯವನ್ನು 2024ನೇ ಸಾಲಿನಾಂತ್ಯಕ್ಕೆ ಪೂರ್ತೀಕರಿಸಲು ಉzಶಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ 5 ಹೊಸ ಶಾಖೆಗಳನ್ನು ಆರಂಭಿಸಲು ಮತ್ತು ಸದಸ್ಯ ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಅಳವಡಿಸಿಕೊಳ್ಳಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.
ಪ್ರಸ್ತುತ ರೂ.874 ಕೋಟಿ ಮೀರಿದ ಒಟ್ಟು ವ್ಯವಹಾರವನ್ನು ಹೊಂದಿ, ಸಂಘದ ಟ್ಞ 2025ರಂತೆ ರೂ.1,೦೦೦ ಕೋಟಿ ಒಟ್ಟು ವ್ಯವಹಾರವನ್ನು 31.೦3.2೦25ಕ್ಕೆ ಸಾಧಿಸುವ ಗುರಿ ಇಟ್ಟುಕೊಂಡಿದ್ದರೂ, ಸಂಘವು ಈ ಹಿಂದಿನ ವರ್ಷಗಳಲ್ಲಿ ಗುರಿ ಮೀರಿದ ಸಾಧನೆಯೊಂದಿಗೆ ಒಟ್ಟು ವ್ಯವಹಾರವನ್ನು ಹೆಚ್ಚಿಸಿಕೊಂಡಿರುವ ಕಾರಣ, ರೂ.1,೦೦೦ ಕೋಟಿ ವ್ಯವಹಾರವನ್ನು ಸಂಘದ ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಒಂದು ವರ್ಷ ಮುಂಚಿತವಾಗಿ ಅಂದರೆ 31.೦3.2೦24ಕ್ಕೇ ಸಾಧಿಸಲು ಸರ್ವ ಪ್ರಯತ್ನವನ್ನು ಮಾಡಲಾಗುವುದೆಂಬ ಭರವಸೆಯನ್ನು ಅಧ್ಯಕ್ಷರು ಸಭೆಯಲ್ಲಿ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರುಗಳಾದ ಎ. ರತ್ನಕಾಂತಿ ಶೆಟ್ಟಿ, ಕೆ. ಸೀತಾರಾಮ ರೈ ಸವಣೂರು, ಡಾ.ಕೆ.ಸುಭಾಶ್ಚಂದ್ರ ಶೆಟ್ಟಿ, ಪಿ.ಎಸ್.ಅಡ್ಯಂತಾಯ, ಸಿಎ ಎಚ್. ಆರ್. ಶೆಟ್ಟಿ, ವಿಠಲ ಪಿ. ಶೆಟ್ಟಿ, ಯಂ. ರಾಮಯ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ಪಿ.ಬಿ. ದಿವಾಕರ ರೈ, ರವೀಂದ್ರನಾಥ ಜಿ. ಹೆಗ್ಡೆ, ಕುಂಬ್ರ ದಯಾಕರ್ ಆಳ್ವ, ಬೆಳ್ಳಿಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಡಾ.ಎಂ.ಸುಧಾಕರ ಶೆಟ್ಟಿ ಮತ್ತು ಅರಿಯಡ್ಕ ಚಿಕ್ಕಪ್ಪ ನಾಕ್ ಉಪಸ್ಥಿತರಿದ್ದರು.
ಮಹಾಪ್ರಬಂಧಕರಾದ ಗಣೇಶ್ ಜಿ.ಕೆ. ಲೆಕ್ಕಪರಿಶೋಧಿತ ಆರ್ಥಿಕ ತಖ್ತೆ, ಲಾಭ ವಿಂಗಡಣೆ, ಬಜೆಟ್ ಮತ್ತು ಬೈಲಾ ತಿದ್ದುಪಡಿ ಪ್ರಸ್ತಾವನೆಗಳನ್ನು ಮಂಡಿಸಿದರು. 2022-23ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ತೋರಿ ಪ್ರಗತಿ ಸಾಧಿಸಿದ ಶಾಖೆಗಳನ್ನು ಗೌರವಿಸಲಾಯಿತು.
ನಿರ್ದೇಶಕರುಗಳಾದ ಕೆ. ಸೀತಾರಾಮ ರೈ ಸವಣೂರು ಸ್ವಾಗತಿಸಿದರು, ರಾಮಯ ಶೆಟ್ಟಿ ವಂದಿಸಿದರು. ಸಿಬ್ಬಂದಿಗಳಾದ ಅಶ್ವಿನಿ ಸಹನ್ ಶೆಟ್ಟಿ ಪ್ರಾರ್ಥಿಸಿದರು, ಧನಂಜಯ್ ಕುಮಾರ್ ಮತ್ತು ಅಕ್ಷತಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಬಹುಸಂಖ್ಯೆಯಲ್ಲಿ ಸಂಘದ ಸದಸ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here