ಕಿಲ್ಲೆ ಮೈದಾನದಲ್ಲಿ ಹೋಂಡಾ ಬಿಗ್‌ವಿಂಗ್ ಬೈಕ್‌ಗಳ ಮೆಗಾ ಕಾರ್ನಿವಲ್ -ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

0

ಪುತ್ತೂರು: ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಹೋಂಡಾ ದ್ವಿಚಕ್ರ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ನೀಡುತ್ತಿರುವ ಕಾಂಚನ ಮೋಟರ‍್ಸ್ನ ಅಂಗ ಸಂಸ್ಥೆ, ದ.ಕ ಹಾಗೂ ಉಡುಪಿ ಜಿಲ್ಲೆಯ ಹೋಂಡಾ ಬಿಗ್‌ವಿಂಗ್ ಬೈಕ್‌ಗಳ ಅಧಿಕೃತ ಡೀಲರ್ ಕಾಂಚನ ಹೋಂಡಾದ ವತಿಯಿಂದ ಪುತ್ತೂರು ಹಾಗೂ ಸುತ್ತಮುತ್ತಲಿನ ಜನತೆಯ ಅನುಕೂಲಕ್ಕಾಗಿ ಹೋಂಡಾ ಬಿಗ್ ಬೈಕ್‌ಗಳ ಡಿಸ್‌ಪ್ಲೇ ಮತ್ತು ಟೆಸ್ಟ್ರೈಡ್ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಿತು. ಎರಡು ದಿನ ನಡೆದ ಹೋಂಡಾ ಬಿಗ್‌ವಿಂಗ್ ಬೈಕ್‌ಗಳ ಮೆಗಾ ಕಾರ್ನಿವಲ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೋಂಡಾ ಬಿಗ್‌ವಿಂಗ್ ಸಂಸ್ಥೆಯು 1 ಲಕ್ಷಕ್ಕಿಂತಲೂ ಹೆಚ್ಚಿನ ಗ್ರಾಹಕರನ್ನು ಹೊಂದಿದ್ದು ಇದರ ಸಂಭ್ರಮಾಚರಣೆ ಪ್ರಯುಕ್ತ ಮೊದಲ 10 ಸಾವಿರ ಗ್ರಾಹಕರಿಗೆ 10 ವರ್ಷಗಳ ವಿಸ್ತೃತ ವ್ಯಾರಂಟಿಯನ್ನು ನೀಡುತ್ತಿದೆ. ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಕಾಂಚನ ಹೋಂಡಾ ಬಿಗ್‌ವಿಂಗ್ ಕಾರ್ಯ ನಿರ್ವಹಿಸುತ್ತಿದೆ. ಪ್ರೀಮಿಯಂ ಬೈಕ್ ಆಕಾಂಕ್ಷಿಗಳು ಹೋಂಡಾ ಪ್ರೀಮಿಯಂ ಬೈಕ್‌ಗಳ ಟೆಸ್ಟ್ ರೈಡ್ ಜತೆಗೆ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಗಳ ಸೌಲಭ್ಯವನ್ನೂ ಪಡೆಯಬಹುದು. ಬಿಗ್‌ವಿಂಗ್ ಬೈಕ್‌ಗಳ ಬಗೆಗಿನ ಹೆಚ್ಚಿನ ಮಾಹಿತಿ ಹಾಗೂ ಟೆಸ್ಟ್ ರೈಡ್‌ಗಾಗಿ ಕೊಟ್ಟಾರ ಚೌಕಿಯಲ್ಲಿರುವ ಹೋಂಡಾ ಬಿಗ್‌ವಿಂಗ್ ಮಂಗಳೂರು ಶೋರೂಂನ್ನು ಸಂಪರ್ಕಿಸಬಹುದು ಅಥವಾ 8147599847ಗೆ ಕರೆ ಮಾಡಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here