ಸೆ.3ರಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ವಿವಿಧ ಸ್ಪರ್ಧೆಗಳು

0

ಅಂದ ಬರಹ ಸ್ಪರ್ಧೆಯ ದಿನ, ಸಮಯದಲ್ಲಿ ಬದಲಾವಣೆ
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪ್ರತಿ ವರ್ಷದಂತೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ನಡೆಯುವ ವಿವಿಧ ಸ್ಪರ್ಧೆಗಳು ಸೆ.3ರಿಂದ ಆರಂಭಗೊಳ್ಳಲಿದೆ. ಸೆ.2ರಂದು ನಡೆಯಬೇಕಾಗಿದ್ದ ಅಂದ ಬರಹ ಸ್ಪರ್ಧೆಯನ್ನು ಸೆ.3ಕ್ಕೆ ಬದಲಾಯಿಸಲಾಗಿದೆ.
ಸೆ.3ರಂದು ಅಂದ ಬರಹ ಸ್ಪರ್ಧೆಯು ಬೆಳಿಗ್ಗೆ ಗಂಟೆ 10ಕ್ಕೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ. 1 ರಿಂದ 2ನೇ ತರಗತಿ, 3 ರಿಂದ 4ನೇ ತರಗತಿ ಮತ್ತು 5 ರಿಂದ 7 ತರಗತಿಗಳಿಗೆ ಆಂಗ್ಲ ಮತ್ತು ಕನ್ನಡದಲ್ಲಿ ಅಂದ ಬರಹ ಸ್ಪರ್ಧೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ ಗಂಟೆ 9.3೦ರಿಂದ ಚದುರಂಗ ಸ್ಪರ್ಧೆಯು ನಡೆಯಲಿದೆ. ಸೆ.10ರಂದು ಬೆಳಿಗ್ಗೆ ಗಂಟೆ 9.30೦ರಿಂದ ಶ್ರೀ ಗಣೇಶನ ವಿವಿಧ ಭಂಗಿಗಳ ಚಿತ್ರಕಲಾ ಸ್ಪರ್ಧೆಯು ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸೆ.17ರಂದು ಬೆಳಿಗ್ಗೆ ಗಂಟೆ 9.3೦ರಿಂದ ಶ್ರೀ ಗಣೇಶೋತ್ಸವದ ಸಭಾ ವೇದಿಕೆಯಲ್ಲಿ ಭಕ್ತಿಗೀತೆ ಸ್ಪರ್ಧೆ ನಡೆಯಲಿದ್ದು,1 ರಿಂದ 5ನೇ ತರಗತಿ,6 ರಿಂದ 10ನೇ ತರಗತಿ, ಕಾಲೇಜು ವಿಭಾಗ ಮತ್ತು ಸಾರ್ವಜನಿಕರಿಗೆ ಈ ಸ್ಪರ್ಧೆ ನಡೆಯಲಿದೆ. ಸೆ.19ರಂದು ಬೆಳಿಗ್ಗೆ ಗಂಟೆ 10ರಿಂದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಮತ್ತು ಸಾರ್ವಜನಿಕರ ವಿಭಾಗದಲ್ಲಿ ರಂಗವಲ್ಲಿ ಸ್ಪರ್ಧೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರುಗಲಿದೆ. ಅದೇ ದಿನ ಬೆಳಿಗ್ಗೆ ಗಂಟೆ 11 ರಿಂದ ಗಣೇಶೋತ್ಸವದ ಸಭಾ ವೇದಿಕೆಯಲ್ಲಿ 1 ರಿಂದ 4ನೇ ತರಗತಿ, 5 ರಿಂದ 7 ನೇ ತರಗತಿ, 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 11ನೇ ಅಧ್ಯಾಯದ 10 ಶ್ಲೋಕಗಳ ಭಗವದ್ಗೀತಾ ಕಂಠಪಾಠ ಸ್ಪರ್ಧೆ ನಡೆಯಲಿದೆ. 15 ವರ್ಷದ ಒಳಗಿನ ಮಕ್ಕಳಿಗೆ ದೇವಳದ ನಟರಾಜ ವೇದಿಕೆಯಲ್ಲಿ ಶ್ರೀ ಗಣೇಶ ವಿಗ್ರಹ ರಚನೆ ಸ್ಪರ್ಧೆ ನಡೆಯಲಿದೆ. ಎಲ್ಲಾ ಸ್ಪರ್ಧಿಗಳು ಸ್ಪರ್ಧೆಯ 10 ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಉಪಸ್ಥಿತಿಯಲ್ಲಿರಬೇಕೆಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here