ಸವಣೂರು: ಸವಣೂರು ಗ್ರಾ.ಪಂ.ನಲ್ಲಿ 2022-23ನೇ ಸಾಲಿನ ಜಮಾಬಂಧಿ ಕಾರ್ಯಕ್ರಮ ಸವಣೂರು ಗ್ರಾ.ಪಂ.ನ ಕುಮಾರಧಾರ ಸಭಾಂಗಣದಲ್ಲಿ ಸೆ.1ರಂದು ನಡೆಯಿತು. ಜಮಾಬಂಧಿ ಅಧಿಕಾರಿಯಾಗಿ ಜಿ.ಪಂ.ಯೋಜನಾಧಿಕಾರಿ ಸಂಧ್ಯಾ ಕೆ.ಎಸ್. ಜಮಾಬಂಧಿ ನಡೆಸಿಕೊಟ್ಟರು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ವಿಜಯ ,ಅಭಿವೃದ್ಧಿ ಅಧಿಕಾರಿ ಕಮಲ್ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಲೆಕ್ಕಸಹಾಯಕ ಎ.ಮನ್ಮಥ ಅವರು ಜಮಾಬಂಧಿ ವರದಿ ವಾಚಿಸಿದರು. ಗ್ರಾ.ಪಂ.ಸದಸ್ಯರಾದ ರಾಜೀವಿ ಶೆಟ್ಟಿ, ಅಬ್ದುಲ್ ರಝಾಕ್ ಕೆನರಾ, ರಫೀಕ್ ಎಂ.ಎ., ತಾರಾನಾಥ ಬೊಳಿಯಾಲ, ಬಾಬು ಎನ್.,ಯಶೋಧಾ,ಚೆನ್ನು ಮುಂಡೋತ್ತಡ್ಕ ಹಾಗೂ ಗ್ರಾ.ಪಂ.ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ.,ಶಾರದಾ, ಯತೀಶ್ ಕುಮಾರ್, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.