ರಕ್ಷಾಬಂಧನ ಹಬ್ಬವು ನಮ್ಮ ದೇಶದ ಒಗ್ಗಟ್ಟು, ಸಾಮರಸ್ಯತೆಯನ್ನು ಸಾರುತ್ತದೆ- ಬಡೆಕ್ಕಿಲ ಗಣರಾಜ್ ಭಟ್

0

ಪುತ್ತೂರು: ಸೃಷ್ಟಿಯಲ್ಲಿ ಪಂಚಮಹಾಭೂತಗಳಿವೆ. ಅವುಗಳಿಂದಲೇ ಮುಂದೆ ಪ್ರಕೃತಿಯ ಬದಲಾವಣೆ ಇಲ್ಲಿ ಭಗವಂತನ ನೆಲೆ ಇದೆ. ತಪಸ್ಸು ಶ್ರದ್ಧೆ, ಸತ್ಯ, ಋತುಗಳೆಲ್ಲ ಅಲ್ಲಿಂದಲೇ ಬೆಳೆದು ಬಂದಿದೆ. ಆದರೆ ಈಗೀಗ ಇದರಲ್ಲಿ ನಂಬಿಕೆ ಕಡಿಮೆಯಾಗಿ ಅಂಧಾನುಕರಣೆಗೆ ಮಾರು ಹೋಗಿದ್ದೇವೆ. ಬ್ರಿಟಿಷರ ಇತಿಹಾಸದಿಂದ ನಾವುಗಳು ಪೂರ್ತಿಯಾಗಿ ಚೇತರಿಸಿಕೊಳ್ಳದೆ ನಮ್ಮತನದಿಂದ ವಂಚಿತರಾಗಿದ್ದೇವೆ. ಈ ರಕ್ಷಾಬಂಧನ ಹಬ್ಬವು ನಮ್ಮ ದೇಶದ ಒಗ್ಗಟ್ಟು, ಸಾಮರಸ್ಯತೆಯನ್ನು ಸಾರುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ರಕ್ಷಾಬಂಧನ ಆಚರಣೆಯಲ್ಲಿ ಅಭ್ಯಾಗತರಾಗಿ ಆಗಮಿಸಿದ ಬಡೆಕ್ಕಿಲ ಗಣರಾಜ್ ಭಟ್, ಕೆದಿಲ ಇವರು ಹೇಳಿದರು. ಕಾರ್ಯಕ್ರಮದಲ್ಲಿ ಅಭ್ಯಾಗತರು ಭಾರತ ಮಾತೆಗೆ ರಕ್ಷೆ ಕಟ್ಟುವ ಮೂಲಕ ಗೌರವ ನಮನ ಸಲ್ಲಿಸಿದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಕೊಳ್ಳುವ ಮೂಲಕ ಸಹೋದರತ್ವಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ವಸಂತ ಸುವರ್ಣ, ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಮತ್ತು ನಳಿನಿ ವಾಗ್ಲೆ ಹಾಗೂ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. ಸ್ವಾತಿಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here