ಛೋಟಾ ಛಾಂಪಿಯನ್ ಮಕ್ಕಳ ಗೇಮ್ ಶೋನ ಗ್ರಾಂಡ್ ಫಿನಾಲೆ ಗೆ ಶಿವಾಂಶ್ ಕಾಮತ್ ನರಿಮೊಗರು

0

ಪುತ್ತೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಛೋಟಾ ಛಾಂಪಿಯನ್ ಮಕ್ಕಳ ಗೇಮ್ ಶೋನ ಗ್ರಾಂಡ್ ಫಿನಾಲೆ ಗೆ ಶಿವಾಂಶ್ ಕಾಮತ್ ಆಯ್ಕೆಯಾಗಿದ್ದಾರೆ.

ಈಗಾಗಲೇ 2ನೇ ಎಪಿಸೋಡ್ ನಲ್ಲಿ ಕಾಣಿಸಿಕೊಂಡಿರುವ ಶಿವಾಂಶ್- ರಾ ರಾ ರಕ್ಕಮ್ಮ ಹಾಡು ಹಾಗೂ ಹುಲಿ ನೃತ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ.
ಈವರೆಗೆ ಭಾಗವಹಿಸಿದ 80 ಮಕ್ಕಳಲ್ಲಿ ಕೇವಲ 8 ಪುಟಾಣಿಗಳನ್ನು ಫಿನಾಲೆಗೆ ಆಯ್ಕೆ ಮಾಡಿದ್ದು ಅದರಲ್ಲಿ ಶಿವಾಂಶ್ ಕೂಡಾ ಒಬ್ಬ. ತುಮಕೂರಿನಲ್ಲಿ ನಡೆದ ‌ ಗ್ರಾಂಡ್ ಫಿನಾಲೆಯಲ್ಲಿ ಪುಟಾಣಿ ಭಾಗವಹಿಸಿದ್ದು- ಇದೇ ಶನಿವಾರ ಮತ್ತು ಆದಿತ್ಯವಾರದಂದು ಸಾಯಂಕಾಲ 6-00ರಿಂದ 7-30ರವರೆಗೆ zee kannada ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಶಿವಾಂಶ್ ಪುರುಷರಕಟ್ಟೆಯ ನಾಗೇಶ್ ನಾಯಕ್ ಮತ್ತು ವಿದ್ಯಾ ನಾಯಕ್ ದಂಪತಿಗಳ ಮೊಮ್ಮಗ‌. ಗಾಯಕಿ ಗುರುಪ್ರಿಯ ನಾಯಕ್, ಶಿವಾನಂದ ಕಾಮತ್ ದಂಪತಿಗಳ ಪುತ್ರ.

LEAVE A REPLY

Please enter your comment!
Please enter your name here