ಶಾಂತಿನಗರ ಆದರ್ಶ ಯುವಕ ಮಂಡಲಕ್ಕೆ ಆಯ್ಕೆ

0

ಗೌರವಾಧ್ಯಕ್ಷ-ಪ್ರತಾಪ್‌ಚಂದ್ರ ರೈ
ಅಧ್ಯಕ್ಷ-ತೇಜಸ್ ಬಿ.,
ಉಪಾಧ್ಯಕ್ಷ-ಜಗದೀಶ್ ಎ.
ಕಾರ್ಯದರ್ಶಿ-ಪ್ರಜ್ವಲ್ ಬಿ.ಜೆ.

ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಆದರ್ಶ ಯುವಕ ಮಂಡಲದ 2023-25ನೇ ಸಾಲಿನ ಅಧ್ಯಕ್ಷರಾಗಿ ತೇಜಸ್ ಬಿ.,ಉಪಾಧ್ಯಕ್ಷರಾಗಿ ಜಗದೀಶ್ ಎ., ಕಾರ್ಯದರ್ಶಿಯಾಗಿ ಪ್ರಜ್ವಲ್ ಬಿ.ಜೆ.,ಹಾಗೂ ಗೌರವಾಧ್ಯಕ್ಷರಾಗಿ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು ಆಯ್ಕೆಗೊಂಡಿದ್ದಾರೆ.


ಸಂಘದ ಅಧ್ಯಕ್ಷ ಜಯಂತ ಶಾಂತಿನಗರ ಅವರ ಅಧ್ಯಕ್ಷತೆಯಲ್ಲಿ ಶಾಂತಿನಗರದಲ್ಲಿ ನಡೆದ ಯುವಕ ಮಂಡಲದ 2023ನೇ ಸಾಲಿನ ಮಹಾಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಜೊತೆ ಕಾರ್ಯದರ್ಶಿಯಾಗಿ ಸುಮಂತ್, ಸದಸ್ಯರಾಗಿ ಜಯಂತ್ ಎ., ಕಿಶೋರ್, ಯತೀಶ್, ಗುರುರಾಜ್, ಜಗದೀಶ್ ಎಸ್., ಸುರೇಶ್ ಎಸ್., ಗೋಪಾಲಕೃಷ್ಣ, ಪುರುಷೋತ್ತಮ ಗುರುಂಪು, ರೂಪೇಶ್ ಬಿ., ಪವನ್‌ಕುಮಾರ್ ರೈ ಕುದ್ಮಾರುಗುತ್ತು, ಯಶೋಧರ, ಹಂಝ, ಮನೋಜ್ ಬರಮೇಲು ಅವರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ರಜತ್ ಜೈನ್, ವೆಂಕಪ್ಪ ನೆಲ್ತಿಮಾರು, ಪ್ರಸಾದ್ ಆನಾಲು, ಮೋನಪ್ಪ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here