ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ – ದೂರು

0

ಸೂಕ್ತ ವ್ಯವಸ್ಥೆಗೆ ಸಚಿವರಿಗೆ ಮನವಿ

ಪುತ್ತೂರು: ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬೇರೆ, ಬೇರೆ ಸೌಲಭ್ಯಗಳನ್ನು ಸರಕಾರ ನೀಡುತ್ತಿದೆಯಾದರೂ ಶಾಲೆಗಳಿಗೆ ಬೇಕಾದಷ್ಟು ಶಿಕ್ಷಕರನ್ನು ನೀಡುವಲ್ಲಿ ನಿರಾಸಕ್ತಿ ತೋರಿಸುತ್ತಿರುವುದರಿಂದ ಸರಕಾರಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಚಿಕ್ಕ ಮುಡ್ನೂರು ಕಲಿಯುಗ ಸೇವಾ ಸಮಿತಿ ವತಿಯಿಂದ ಶಿಕ್ಷಣ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.


7ನೇ ತರಗತಿವರೆಗೆ ಇರುವ ಶಾಲೆಗಳಲ್ಲಿ 3 ಜನ ಶಿಕ್ಷಕರು ಮಾತ್ರ ಇರುತ್ತಾರೆ ಅದರಲ್ಲಿ ಕೂಡ ಅತಿಥಿ ಶಿಕ್ಷಕರೇ ಹೆಚ್ಚಾಗಿದ್ದಾರೆ ಶಿಕ್ಷಕರು ರಜೆ, ಮೀಟಿಂಗ್, ಅಕ್ಷರದಾಸೋಹ ಕೆಲಸಗಳು ಹೀಗೆ ಬೇರೆ, ಬೇರೆ ಕೆಲಸಗಳನ್ನು ಕೂಡ ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ನಿಗದಿತ ಸಮಯಗಳಲ್ಲಿ ಪಾಠಗಳನ್ನು ಕೂಡ ಮುಗಿಸುವ ಒತ್ತಡ ಇಲಾಖೆ ವತಿಯಿಂದ ಹಾಕಲಾಗುತ್ತಿದೆ. ಆದರೆ ಶಿಕ್ಷಕರ ಸಂಖ್ಯೆ ಹೆಚ್ಚುಗೊಳಿಸುವಲ್ಲಿ ಮಾತ್ರ ಇಲಾಖೆಗಳಿಂದ ಕ್ರಮ ವಹಿಸಲಾಗುತ್ತಿಲ್ಲ. ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಶಿಕ್ಷಕರ ಸಂಖ್ಯೆ ಹೆಚ್ಚುಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

LEAVE A REPLY

Please enter your comment!
Please enter your name here