ಕಾವು: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟ ಕೊಡಮಾಡುವ 2022-23ನೇ ಸಾಲಿನ ತಾಲೂಕುವಾರು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿಯು ಈ ಬಾರಿಯೂ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಲಭಿಸಿದೆ. ಆ ಮೂಲಕ ಸತತ 19ನೇ ಬಾರಿಗೆ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ. ಜತೆಗೆ 2022-23ನೇ ಸಾಲಿನ ಉತ್ತಮ ಗುಣಮಟ್ಟ ಸಂಘದ ಕಾರ್ಯದರ್ಶಿ ಪ್ರಶಸ್ತಿಯು ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಲಭಿಸಿದೆ. ಸೆ.5ರಂದು ಮಂಗಳೂರಿನಲ್ಲಿ ನಡೆದ ದ.ಕ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ, ನಿರ್ದೇಶಕರಾದ ನಾರಾಯಣ ಪ್ರಕಾಶ್ರವರು ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಅಧ್ಯಕ್ಷ ಕೆ. ಕೃಷ್ಣಪ್ರಸಾದ್, ಉಪಾಧ್ಯಕ್ಷ ಸುರೇಂದ್ರ ಬೋರ್ಕರ್ ನನ್ಯ, ಮತ್ತು ಬಾಲಕೃಷ್ಣ ಕೆದಿಲಾಯರವರು ಪ್ರಶಸ್ತಿ ಸ್ವೀಕರಿಸಿದರು.