ಉಪ್ಪಿನಂಗಡಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಪುತ್ತೂರು ತಾಲೂಕಿನಲ್ಲಿಯೇ ಅತ್ಯುತ್ತಮ ಸಂಘದ ಪ್ರಶಸ್ತಿಯನ್ನು ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘವು ಪಡೆದುಕೊಂಡಿದ್ದು, ಇದೇ ಸಂಘದ ನಿರ್ದೇಶಕ ಸದಾನಂದ ಶೆಟ್ಟಿ ಪುತ್ತೂರು ತಾಲೂಕಿನಲ್ಲಿ ಹಸಿರು ಮೇವು ಅಭಿವೃದ್ಧಿ ಪಡಿಸಿದ ಉತ್ತಮ ಹೈನುಗಾರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಮಂಗಳೂರಿನಲ್ಲಿ ನಡೆದ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಪ್ರಶಸ್ತಿಯನ್ನು ಒಕ್ಕೂಟದ ಅಧ್ಯಕ್ಷರಾದ ಸುಚರಿತ ಶೆಟ್ಟಿ ಅವರು ಸಂಘದ ಅಧ್ಯಕ್ಷರಾದ ಜಗದೀಶ್ ರಾವ್ ಮಣಿಕ್ಕಳ ಹಾಗೂ ಕಾರ್ಯದರ್ಶಿ ಶ್ರೀಮತಿ ಮಧುಷಾ ಅವರಿಗೆ ಮತ್ತು ಉತ್ತಮ ಹೈನುಗಾರ ಪ್ರಶಸ್ತಿಯನ್ನು ಸದಾನಂದ ಶೆಟ್ಟಿ ಅವರಿಗೆ ನೀಡಿ ಗೌರವಿಸಿದರು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ, ನಿರ್ದೇಶಕರು ಹಾಗೂ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಸುಮತಿ, ಪ್ರಶಾಂತ್ ಯು., ಬಾಲಚಂದ್ರ ಕೊರಂಬಾಡಿ, ಹಾಲು ಪರಿವೀಕ್ಷಕ ಸುರೇಶ್ ಗೌಂಡತ್ತಿಗೆ ಉಪಸ್ಥಿತರಿದ್ದರು.