ಉಪ್ಪಿನಂಗಡಿ: ಸಾರ್ವಜನಿಕ ಕೃಷ್ಣ ಜನ್ಮಾಷ್ಠಮಿ

0

ಉಪ್ಪಿನಂಗಡಿ : ಇಲ್ಲಿನ ಸಾರ್ವಜನಿಕ ಮೊಸರು ಕುಡಿಕೆ ಸಮಿತಿಯ ಆಶ್ರಯದಲ್ಲಿ ಗುರುವಾರದಂದು ಉಪ್ಪಿನಂಗಡಿಯಲ್ಲಿ ಸಂಭ್ರಮದ ಮಡಿಕೆ ಒಡೆಯುವ ಸ್ಪರ್ಧೆಯು ಜರುಗಿತು.
ವಿಶೇಷವಾಗಿ ನಿರ್ಮಿಸಲಾದ ಅಟ್ಟಳಿಕೆಯಲ್ಲಿ ಕಟ್ಟಲಾದ ಮಡಿಕೆಗಳನ್ನು ಒಡೆದು ಅಲ್ಲಿನ ವಿಶೇಷ ವಸ್ತುಗಳನ್ನು ಪಡೆಯುವ ಸಾಹಸಮಯ ಕ್ರೀಡೆಯಲ್ಲಿ ವಿವಿಧ ತಂಡಗಳು ಭಾಗವಹಿಸಿದ್ದವು.ಪುಟಾಣಿ ಶ್ರೀ ಕೃಷ್ಣವೇಷಧಾರಿ ಮಕ್ಕಳ ಶೋಭಾಯಾತ್ರೆಯಲ್ಲಿ ನೃತ್ಯ ಭಜನಾ ತಂಡಗಳು ವಿಶೇಷ ಆಕರ್ಷಣೆಗೆ ಒಳಗಾಗಿದ್ದವು.


ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯರವರು ಶ್ರೀ ಕೃಷ್ಣ ಜೀವನಾದರ್ಶದ ಪಾಲನೆಯೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕೆಂದರು.


ಮಾಜಿ ಶಾಸಕ ಸಂಜೀವ ಮಟಂದೂರು , ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಮೊಸರು ಕುಡಿಕೆ ಸಮಿತಿಯ ಅಧ್ಯಕ್ಷ ಸುರೇಶ್ ಅತ್ರಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಾಯಂಕಾಲ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಧಾರ್ಮಿಕ ಉಪನ್ಯಾಸವನ್ನು ನೀಡಿದ್ದು , ಉಪ್ಪಿನಂಗಡಿ ಸಿ ಎ ಬ್ಯಾಂಕ್ ಅಧ್ಯಕ್ಷ ಕೆ ವಿ ಪ್ರಸಾದ್, ಉದ್ಯಮಿ ನಟೇಶ್ ಪೂಜಾರಿ, , ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಪ್ರೇಮಲತಾ ಕಾಂಚನಾ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಎನ್ ಯಶವಂತ ಪೈ, ವಿದ್ಯಾಧರ ಜೈನ್, ಬಿಪಿನ್ ಜೆ, ಕಂಗ್ವ್ವೆ ವಿಶ್ವನಾಥ ಶೆಟ್ಟಿ, ಕಿಶೋರ್ ಜೋಗಿ, ಪುರುಷೋತ್ತಮ ಮುಂಗ್ಲಿಮನೆ, ಮುಕುಂದ ಬಜತ್ತೂರು, ಯತೀಶ್ ಶೆಟ್ಟಿ, ಕೆ ಜಗದೀಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಜಯಂತ ಪುರೋಳಿ, ಹರಿರಾಮಚಂದ್ರ, ಉಷಾ ಮುಳಿಯ, ಹರೀಶ್ ನಾಯಕ್, ಸುದರ್ಶನ್, ಮಹೇಶ್ ಬಜತ್ತೂರು, ರವಿನಂದನ್ ಹೆಗ್ಡೆ, ಕಿಶೋರ್ ನೀರಕಟ್ಟೆ, ಶಶಿಧರ್ ಶೆಟ್ಟಿ, ಕೃಷ್ಣಪ್ರಸಾದ್ ದೇವಾಡಿಗ, ಸುನಿಲ್ ಸಂಗಮ್, ಎನ್ ಉಮೇಶ್ ಶೆಣೈ, ಮತ್ತಿತರರು ಭಾಗವಹಿಸಿದ್ದರು.
ಪೋಟೋ ಪೈಲ್ ನೇಮ್ : ಯುಪಿಪಿಸೆಪ್ಟೆ೭೨ ಮಡಿಕೆ ಒಡೆಯಲು ಯತ್ನಿಸುವುದು

LEAVE A REPLY

Please enter your comment!
Please enter your name here