ಪುತ್ತೂರು: ಔಷಧೀಯ ಅನ್ವೇಷನೆ ಪ್ರಕ್ರಿಯೆ ಕುರಿತ ಯುನೈಟೆಡ್ ಕಿಂಗ್‌ಡಮ್ ನಲ್ಲಿರುವ ಯುನಿರ್ವಸಿಟಿಯಲ್ಲಿ ‘ಎಮ್.ಎಸ್ ಡ್ರಗ್ ಡಿಸ್ಕವರಿ’ ಎಂಬ ವಿಷಯದ ಕುರಿತು ವಿದ್ಯಾಭ್ಯಾಸಕ್ಕೆ ದೇಶದಲ್ಲಿ ಆಯ್ಕೆಗೊಂಡ 7 ಮಂದಿಯಲ್ಲಿ ಕರ್ನಾಟಕದಿಂದ ಕುಳ ಗ್ರಾಮದ ಕಬಕ ಸಮೀಪದ ಅನುಷಾ ಟಿ. ಅವರು ಆಯ್ಕೆಗೊಂಡಿದ್ದಾರೆ.
ಕುಳ ಗ್ರಾಮದ ನಿವಾಸಿ ವಿಟ್ಲ ಪೊಲೀಸ್ ಠಾಣೆಯಲ್ಲಿರುವ ಎ.ಎಸ್.ಐ ಜಯರಾಮ ಮತ್ತು ದೀಪಾ ದಂಪತಿ ಪುತ್ರಿ ಅನುಷಾ ಜೆ ಅವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮುಗಿಸಿ, ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಪದವಿ ಮುಗಿಸಿ ಹೆಚ್ಚಿನ ವಿದ್ಯಾಭಸ್ಯಾಸಕ್ಕಾಗಿ ವಿದೇಶದ ಯುನೈಟೆಡ್ ಕಿಂಗ್‌ಡಂಮ್ ಯುನಿರ್ವಸಿಟಿಯಲ್ಲಿ ಎಮ್.ಎಸ್ ಡ್ರಗ್ ಡಿಸ್ಕವರಿ ಕುರಿತ ವಿಷಯದ ಬಗ್ಗೆ ವಿದ್ಯಾಭ್ಯಾಸಕ್ಕೆ ಆಯ್ಕೆಯಾಗಿದ್ದಾರೆ. ದೇಶದಲ್ಲಿ ನೂರಾರು ಮಂದಿ ಅರ್ಜಿ ಸಲ್ಲಿಸಿದವರಲ್ಲಿ ಒಟ್ಟು ಏಳು ಮಂದಿ ಈ ಕೋರ್ಸ್‌ಗೆ ಆಯ್ಕೆಗೊಂಡಿದ್ದು, ಕರ್ನಾಟಕದಿಂದ ಅನುಷಾ ಜೆ ಆಯ್ಕೆಗೊಂಡಿದ್ದಾರೆ. ಸೆ.13ರಂದು ಅವರು ಯು.ಕೆ.ಗೆ ತೆರಳಲಿದ್ದಾರೆ.