ನೆಲ್ಯಾಡಿ: ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಖೋ ಖೋ ಪಂದ್ಯಾಟಕ್ಕೆ ಆಯ್ಕೆಗೊಂಡಿರುವ ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಯ ಬಾಲಕ ಹಾಗೂ ಬಾಲಕಿಯರ ತಂಡಕ್ಕೆ ಶಾಲೆಯ ಹಳೆ ವಿದ್ಯಾರ್ಥಿ, ವಿದೇಶದಲ್ಲಿ ಉದ್ಯಮಿಯಾಗಿರುವ ಎಸ್.ಅಬ್ದುಲ್ ನಿಝಾಂರವರು ಕ್ಯಾಪ್ ಕೊಡುಗೆಯಾಗಿ ನೀಡಿ, ಪಂದ್ಯಾಟಕ್ಕೆ ಖರ್ಚಾಗುವ ಸಂಪೂರ್ಣ ವೆಚ್ಚವನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ಮುಹಮ್ಮದ್ ರಫೀಕ್ ಕೋಲ್ಪೆ, ಶಾಲಾ ಮುಖ್ಯೋಪಾಧ್ಯಾಯಿನಿ ಗಿರಿಜಾ ಪಿ., ಶಿಕ್ಷಕಿ ಭವಾನಿ ಬಿ.ಎಲ್., ಎಸ್‌ಡಿಎಂಸಿ ಸದಸ್ಯರಾದ ಕೆ.ಪಿ.ಅಶ್ರಫ್, ಸಂತೋಷ್ ಎಣ್ಣೆತ್ತೋಡಿ, ಬಾಬು ಪಾಂಡಿಬೆಟ್ಟು, ನಸೀಮಾ, ರಝಾಕ್ ಆರ್ಲ, ಮನೋಜ್ ಆರ್ಲ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಕೆ.ಇಸ್ಮಾಯಿಲ್ ಕೋಲ್ಪೆ, ಉಪಾಧ್ಯಕ್ಷ ತೌಫೀಕ್ ಎಂ.ಕೆ., ತರಬೇತುದಾರರಾದ ಉಬೈದ್ ಎಚ್., ಸಪ್ವಾನ್ ಕಡಂಬಿಲ, ರಾಯಿಝ್ ಆರ್ಲ, ರಾಝಿಕ್ ಕೆ.ಕೆ., ಮುಸ್ತಫಾ ಎಂ., ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಾನಿ ಎಸ್.ಅಬ್ದುಲ್ ನಿಝಾಂರವರು ಈ ಹಿಂದೆಯೂ ಶಾಲೆಗೆ ಹಲವು ಕೊಡುಗೆ ನೀಡಿದ್ದರು.