ನಾಳೆ(ಸೆ.9): ಮುಕ್ರಂಪಾಡಿಯಲ್ಲಿ ಮೋಕ್ಷ ಮೋಹರ ಯಕ್ಷಗಾನ ಪ್ರದರ್ಶನ

0

ಪುತ್ತೂರು: ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಮಳೆಗಾಲದ ಅಮೋಘ ಯಕ್ಷಗಾನ ಪ್ರದರ್ಶನ ಸೆ.9ರಂದು ಶನಿವಾರ ಸಂಜೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನಡೆಯಲಿದೆ.

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ, ಪಾವಂಜೆ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ಮೋಕ್ಷ ಮೋಹರ ಎಂಬ ಪೌರಾಣಿಕ ಕಥಾಭಾಗ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ, ಪ್ರಫುಲ್ಲಚಂದ್ರ ನೆಲ್ಯಾಡಿಯವರ ಭಾಗವತಿಕೆಯಲ್ಲಿ ನಡೆಯಲಿದೆ. ಗೌರವ ಪ್ರವೇಶ ಹಾಗೂ ಮುಖ್ಯ ಅತಿಥಿಗಳು I ಕ್ಲಾಸ್ 500 ರೂ ಹಾಗೂ II ಕ್ಲಾಸ್ 300 ರೂ ಆಗಿರುತ್ತದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮದ ವ್ಯವಸ್ಥಾಪಕ ಮಹಾಬಲೇಶ್ವರ ಭಟ್ ಪಂಜಿಗುಡ್ಡೆರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here