ಪುತ್ತೂರು:ಪುತ್ತಿಲ ಪರಿವಾರದ ಬಡಗ್ನನೂರು ಗ್ರಾಮ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷರಾಗಿ ರೇಖಾ ನಾಗರಾಜ್ ಹಾಗೂ ಕಾರ್ಯದರ್ಶಿಯಾಗಿ ಜ್ಯೋತಿ ಕೇಪುಳುಕಾನ ಹಾಗೂ ಉಪಾಧ್ಯಕ್ಷರಾಗಿ ವೈಷ್ಣವಿ ಬರೆ ಆಯ್ಕೆಯಾಗಿದ್ದಾರೆ.
ಪುತ್ತೂರು ತಾಲೂಕು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಮಲ್ಲಿಕಾ ಪ್ರಸಾದ್ ಕನ್ನಯ, ಬಡಗನ್ನೂರು ಗ್ರಾಮ ಸಮಿತಿಯ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ ಹಾಗೂ ಪುತ್ತಿಲ ಪರಿವಾರದ, ಬಡಗನ್ನೂರು ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕೃಷ್ಣ ಪಾಟಾಳಿ ಸ್ವಾಗತಿಸಿ, ಮಲ್ಲಿಕಾ ಪ್ರಸಾದ್ ವಂದಿಸಿದರು.