ವಿಟ್ಲ: ಜೆಸಿಐ ವಿಟ್ಲ ಘಟಕದ ವತಿಯಿಂದ ಸೆ.9ರಿಂದ ಸೆ.15ರ ವರೆಗೆ ನಡೆಯಲಿರುವ ಜೆಸಿಐ ಸಪ್ತಾಹ “ಜೈತ್ರ”ದ ಉದ್ಘಾಟನೆಯನ್ನು ಜೇಸಿಐ ವಿಟ್ಲ ಘಟಕದ ಪೂರ್ವಾಧ್ಯಕ್ಷರಾದ ಮೋನಪ್ಪ ಶೆಟ್ಟಿಯವರು ನೆರವೇರಿಸಿ ಶುಭಹಾರೈಸಿದರು. ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ವಿಶ್ವೇಶ್ವರ ವಿ.ಕೆ.ರವರು ಆರೋಗ್ಯ ತಪಾಸಣೆಯ ಮಹತ್ವವನ್ನು ವಿವರಿಸಿದರು.
ಜೆಸಿಯ ಪೂರ್ವಾಧ್ಯಕ್ಷರು ಹಾಗೂ ಖ್ಯಾತ ವಕೀಲರಾದ ಜಯರಾಮ ರೈ, ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವೇದಾವತಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.
ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಜೆಸಿ ಪರಮೇಶ್ವರ ಹೆಗಡೆ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ನಿಕಟ ಪೂರ್ವಾಧ್ಯಕ್ಷರಾದ ಜೆಸಿ ಚಂದ್ರಹಾಸ ಕೊಪ್ಪಳ ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ದೀಕ್ಷಿತ್ ಜಿ ವಂದಿಸಿದರು. ಸಪ್ತಾಹದ ನಿರ್ದೇಶಕರಾದ ರಿತೇಶ್ ಶೆಟ್ಟಿ ಕಾರ್ಯಕ್ರಮದ ಮುನ್ನೋಟವನ್ನು ಸಭೆಗೆ ತಿಳಿಸಿದರು. ಬಳಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನೆರವೇರಿತು. ಸುಮಾರು 300 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದು ಕೊಂಡರು.