ನಿಡ್ಪಳ್ಳಿ: ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಮಕ್ಕಳಿಗೆ ವಲಯ ಮಟ್ಟದ ಗ್ರಾಮಾಂತರ ಕ್ರೀಡಾ ಕೂಟ ಬರುವ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸುವ ಬಗ್ಗೆ ಪೂರ್ವಭಾವಿ ಸಭೆ ಸೆ.10ರಂದು ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಮಾಧವ ಪೂಜಾರಿ ರೆಂಜ ಇವರ ಅಧ್ಯಕ್ಷತೆಯಲ್ಲಿ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಬೇಕಾದ ಆರ್ಥಿಕ ಕ್ರೊಡೀಕರಣ, ಆಮಂತ್ರಣ ಪತ್ರ ತಯಾರಿಸುವುದು ಗಣ್ಯರನ್ನು ಆಮಂತ್ರಿಸುವುದು, ಕ್ರೀಡಾಂಗಣದ ತಯಾರಿ ಮೊದಲಾದ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಕ್ರೀಡಾ ಕೂಟ ಬಹಳ ಅಚ್ಚುಕಟ್ಟಾಗಿ ನಡೆಯಲು ಬೇಕಾದ ವಿವಿಧ ಸಮಿತಿಯನ್ನು ರಚಿಸಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಇವರ ಸಂಚಾಲಕತ್ವದಲ್ಲಿ ವ್ಯವಸ್ಥಿತವಾಗಿ ಕ್ರೀಡಾ ಕೂಟ ನಡೆಸಲು ತೀರ್ಮಾನಿಸಲಾಯಿತು.ಕ್ರೀಡಾ ಕೂಟ ನಡೆಯಲು ಸರ್ವರ ಸಹಕಾರವನ್ನು ಕೋರಲಾಯಿತು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ,ದೈಹಿಕ ಶಿಕ್ಷಕ ಅಸೀಫ್ ತಂಬುತ್ತಡ್ಕ, ಹಮೀದ್ ಕೊಮ್ಮೆಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ರಜಾಕ್, ಉಪಾಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಅಬ್ದುಲ್ ಶಮೀರ್, ಎಸ್.ಡಿ.ಎಂ.ಸಿ ಸದಸ್ಯ ಐತ್ತಪ್ಪ.ಬಿ, ಹರೀಶ್ ಗೌಡ ಗುಮ್ಮಟೆಗದ್ದೆ, ದಿನೇಶ್ ಮಿತ್ತಡ್ಕ, ನಿತಿನ್ ಮಡ್ಯಂಪಾಡಿ, ಸಿದ್ದಿಕ್ ತಂಬುತ್ತಡ್ಕ, ಫಾರೂಕ್ ರೆಂಜ, ಗಣೇಶ್ ಮಿತ್ತಡ್ಕ, ಶೇಷನ್ ಪಾರ,ಶಾಲಾ ಪೋಷಕ ಪ್ರಮೋದ್ ಕುಮಾರ್ ರೈ, ಸಹಶಿಕ್ಷಕಿ ಮಂಜುಳಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಮುಖ್ಯ ಗುರು ವಿಜಯ ಕುಮಾರ್. ಎಂ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ವಂದಿಸಿದರು.