ಪುತ್ತೂರು: ಗದಗ ಜಿಲ್ಲೆಯ ಹಿರಟಿ ತಾಲೂಕಿನ ನಿಂಗಪ್ಪ ಹಾಗೂ ರೇಣುಕಾ ದಂಪತಿ ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಅವರ ತೋಟದ ಕೆಲಸಕ್ಕೆ ಸೇರಿದ್ದು, ಈ ವೇಳೆ ನಿಂಗಪ್ಪ-ರೇಣುಕಾರವರ ಮೊಮ್ಮಗಳು 5ನೇ ತರಗತಿಯಲ್ಲಿ ಓದುತ್ತಿರುವ ನಿಂಗಮ್ಮ ಅವರೂ ಜೊತೆಗೆ ಬಂದಿದ್ದು ಶಾಲೆಗೆ ಹೋಗಲು ಹಿಂದೇಟು ಹಾಕಿದ್ದಳು. ಈ ಬಗ್ಗೆ ವಿಚಾರಿಸಿದ ಯಾಕೂಬ್ ಮುಲಾರ್ ಅವರು ನಿಂಗಮ್ಮ ಅವರಿಗೆ ಯುನಿಫಾರ್ಮ್, ಪಠ್ಯ ಪುಸ್ತಕ ತೆಗೆದುಕೊಟ್ಟು ಮುಂಡೂರು ಸ.ಉ.ಹಿ.ಪ್ರಾ.ಶಾಲೆಗೆ ಸೇರಿಸಿದ್ದಾರೆ. ಮುಂಡೂರು ಶಾಲಾ ಮುಖ್ಯ ಶಿಕ್ಷಕಿ ವಿಜಯಾ, ವಿದ್ಯಾರ್ಥಿನಿಯ ಅಜ್ಜ ನಿಂಗಪ್ಪ, ಅಜ್ಜಿ ರೇಣುಕಾ ಹಾಗೂ ಸ್ಥಳೀಯರಾದ ನೀಲೇಶ್ ನಾಯ್ಕ್ ಅಂಬಟ ಉಪಸ್ಥಿತರಿದ್ದರು. ಯಾಕೂಬ್ ಮುಲಾರ್ ಅವರ ಶೈಕ್ಷಣಿಕ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ.
