ವಿಟ್ಲ: ಶೋರಿನ್ – ರಿಯು ಕರಾಟೆ ಅಸೋಸಿಯೇಷನ್ (ರಿ), ಸ್ವಾಮಿ ಸ್ಟ್ರೆಂತ್ ಟ್ರೈನಿಂಗ್ ಮತ್ತು ಹೆಚ್.ಕೆ. ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಷನ್, ಮೂಡಬಿದ್ರೆ ಇದರ ಜಂಟಿ ಆಶ್ರಯದಲ್ಲಿ ಸೆ.9ರಂದು ಮೂಡಬಿದ್ರೆಯಲ್ಲಿ ನಡೆದ 20ನೇ ಮುಕ್ತ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ -2023ರಲ್ಲಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಶಮಿರಾಜ್ ಆಳ್ವ(7ನೇ ತರಗತಿ) ಕುಮಿಟೆ ಹಾಗೂ ಕಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಐಶಲ್ ಮಾರ್ಟಿಸ್( 8ನೇ ತರಗತಿ),ರಿಷಿತ್ ರೈ(7ನೇ ತರಗತಿ) ಹಾಗೂ ತ್ರಿಶಾನ್ ಕೆ (6ನೇ ತರಗತಿ) ಕುಮಿಟೆಯಲ್ಲಿ ದ್ವಿತೀಯ, ಮೊಹಮ್ಮದ್ ಸಹಲ್ (4ನೇ ತರಗತಿ) ಹಾಗೂ ಮೊಹಮ್ಮದ್ ಸಹಮ್(4ನೇ ತರಗತಿ) ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಕರಾಟೆ ತರಬೇತುದಾರ ಸೆನ್ಸಾಯಿ ಮೋಹನ್ ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ.