ಉಪ್ಪಿನಂಗಡಿ: ಕರುವೇಲು ಬದ್ರಿಯಾ ಜುಮಾ ಮಸೀದಿ, ಎಸ್ಕೆಸ್ಸೆಸ್ಸೆಫ್ ಕ್ಯಾಂಪಸ್ ವಿಂಗ್ ವತಿಯಿಂದ ಇಲ್ಲಿನ ಕರುವೇಲು ಮಸೀದಿಯಲ್ಲಿ ಎಸ್ಕೆಸ್ಸೆಸ್ಸೆಫ್ ಬಾಲ್ಯೋತ್ಸವ ಮತ್ತು ಮಾದಕ ವಸ್ತುಗಳ ವಿರುದ್ಧ ಮಾಹಿತಿ ಕಾರ್ಯಾಗಾರ ನಡೆಯಿತು.
ಸ್ಥಳೀಯ ಖತೀಬ್ ಸೈಯದ್ ಅನಾಸ್ ಹಾದೀ ತಂಙಳ್ ಅಲ್ ಅಝ್ಹರಿ ಕಾರ್ಯಕ್ರಮ ಉದ್ಘಾಟಿಸಿ, ದುವಾಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ರಾಜೇಶ್ ಕೆ.ವಿ., ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪೆರ್ನೆ ಗ್ರಾ.ಪಂ. ಸದಸ್ಯ ಫಾರೂಕ್ ಪೆರ್ನೆ, ಮೊಹಿದ್ದೀನ್ ಹಾಜಿ ಕಮರ್, ಕರುವೇಲು ಎಸ್ಕೆಎಸ್ಸೆಸ್ಸೆಫ್ ಶಾಖೆಯ ಅಧ್ಯಕ್ಷ ಆರೀಫ್ ಎ.ಕೆ.ಎಸ್., ಎಸ್ಕೆಸ್ಸೆಸ್ಸೆಫ್ ಪೆರ್ನೆ ಕ್ಲಸ್ಟರ್‌ನ ಅಧ್ಯಕ್ಷ ಮುಹಮ್ಮದ್ ಮೋನು, ಅಬ್ದುಲ್ ರಹ್ಮಾನ್, ಅಶ್ರಫ್ ಚಕ್ರವರ್ತಿ, ಅಬ್ದುಲ್ ಲತೀಫ್, ಮುನ್ನ, ಹಾಫಿಳ್ ಆಶಿಕ್, ಅಶ್ರಫ್ ಮೆಕಾನಿಕ್, ಮತ್ತು ಕುವ್ವತುಲ್ ಇಸ್ಲಾಂ ಮದ್ರಸ ಎಸ್ಕೆಎಸ್‌ಬಿವಿ ವಿಧ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಉಸ್ತಾದ್ ಅಬೂಬಕ್ಕರ್ ಸಿದ್ದೀಕ್ ರಹ್ಮಾನಿ ಸ್ವಾಗತಿಸಿದರು. ಇಂಬ್ರಾನ್ ದಾರಿಮಿ ವಂದಿಸಿದರು.