ಪಡಿತರ ಚೀಟಿ ತಿದ್ದುಪಡಿಯ ಸರ್ವರ್ ಸಮಸ್ಯೆ -ಸಾರ್ವಜನಿಕರ ಪರದಾಟ

0

ಆಲಂಕಾರು : ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಜಿಲ್ಲಾವಾರು ಬದಲಾವಣೆ ಮಾಡಿ ಆಹಾರ ಇಲಾಖೆ ಆದೇಶವನ್ನು ಹೊರಡಿಸಿತ್ತು.ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ಸೆ. 12ರಿಂದ ಸೆ. 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಟ್ಟಿತ್ತುಈ ಮೊದಲು ಸೆ 1ರಿಂದ ಸೆ. 10ರ ವರೆಗೆ ಪಡಿತರ ಚೀಟಿ ತಿದ್ದುಪಡಿಗೆ ನಿಗದಿಪಡಿಸಿದ್ದ ಆದೇಶವನ್ನು ಇಲಾಖೆ ಹಿಂಪಡೆದಿದೆ.

ಪಡಿತರ ಚೀಟಿ ತಿದ್ದುಪಡಿಗೆ ಅಧಿಕ ಅರ್ಜಿ ಸಲ್ಲಿಕೆಯಾಗುತ್ತಿರುವ ಕಾರಣದಿಂದ ಆಹಾರ ಇಲಾಖೆಯ ಸರ್ವರ್‌ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಇದರಿಂದಾಗಿ ಜನರು ಪಡಿತರ ಚೀಟಿ ತಿದ್ದುಪಡಿಗೆ ವಿವಿಧ ಸೇವಾ ಕೇಂದ್ರಗಳನ್ನು ಸಂಪರ್ಕಿಸಿದರೂ ತಿದ್ದುಪಡಿ ಆಗುತ್ತಿರಲಿಲ್ಲ. ಈ ಸಮಸ್ಯೆಯನ್ನು ಗಮನಿಸಿದ ಆಹಾರ ಇಲಾಖೆ ಸರ್ವರ್ ಸಮಸ್ಯೆ ನಿಭಾಯಿಸಲು ಇದೀಗ ಜಿಲ್ಲಾವಾರು ದಿನಾಂಕವನ್ನು ನಿಗದಿಪಡಿಸಿದ್ದು ಅದರಂತೆ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ ಸಹಿತ ವಿವಿಧ ಜಿಲ್ಲೆಗಳಲ್ಲಿ ದಿನಾಂಕ ನಿಗದಿಪಡಿಸಿತ್ತು.ಆದರೆ ಸರ್ವರ್ ಸಮಸ್ಯೆ ಮುಂದುವರೆದಿದ್ದು ಜನರು ಸೇವಾ ಕೇಂದ್ರಗಳಿಗೆ ಅಲೆದಾಡುವ ನಿರ್ಮಾಣವಾಗಿದೆ.ಮಾತ್ರವಲ್ಲ ಸೇವಾ ಕೇಂದ್ರಗಳಲ್ಲಿ ತಿದ್ದುಪಡಿಗಾಗಿ ಬರುವವರ ಸಂಖ್ಯೆ ಜಾಸ್ತಿಯಾಗಿದ್ದು ನೂಕು ನುಗ್ಗಲಿಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

LEAVE A REPLY

Please enter your comment!
Please enter your name here