ನೆಲ್ಯಾಡಿ: ಶ್ರೀರಾಮ ವಿದ್ಯಾಲಯದಲ್ಲಿ ತರಗತಿ ಕೊಠಡಿಗಳ ಲೋಕಾರ್ಪಣೆ, ಆಂಗ್ಲ ಮಾದ್ಯಮ ತರಗತಿಯ ಆರಂಭೋತ್ಸವ

0

ನೆಲ್ಯಾಡಿ: ಶ್ರೀ ರಾಮ ವಿದ್ಯಾಲಯ, ಸೂರ್ಯನಗರ ನೆಲ್ಯಾಡಿ ಇಲ್ಲಿಯ ನೂತನ ತರಗತಿ ಕೊಠಡಿಗಳ ಉದ್ಘಾಟನೆ ಮತ್ತು ಆಂಗ್ಲ ಮಾದ್ಯಮ ತರಗತಿಯ ಆರಂಭೋತ್ಸವ ಕಾರ್ಯಕ್ರಮ ಸೆ. 12 ರಂದು ನಡೆಯಿತು.


ನೂತನ ತರಗತಿ ಕೊಠಡಿಗಳ ಉದ್ಘಾಟನೆ ಮತ್ತು ಆಂಗ್ಲ ಮಾದ್ಯಮ ತರಗತಿಯ ಆರಂಭೋತ್ಸವವನ್ನೂ ಮಾಜಿ ಸಚಿವರು, ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.


ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ, ಪುತ್ತೂರು ವಿವೇ ಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಕೃಷ್ಣ ಶೆಟ್ಟಿ ಕಡಬ, ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ಡಾ| ಮುರಳೀಧರ್ , ಕಾರ್ಯದರ್ಶಿ ಮೂಲಚಂದ್ರ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೂತನ ಕಟ್ಟಡಕ್ಕೆ ಶ್ರಮಿಸಿದ ಗುತ್ತಿಗೆದಾರರು, ಬಣ್ಣ ಬಳಿದವರು, ಗಾರೆ ಕೆಲಸದವರನ್ನು ಸ್ಮರಣಿಕೆ ನೀಡುವುದರ ಮೂಲಕ ಗೌರವಿಸಲಾಯಿತು.


ಕಾರ್ಯಕ್ರಮವನ್ನೂ ಶ್ರೀಮತಿ ಕಾವ್ಯ ನಿರೂಪಿಸಿದರು. ಡಾ|ಮುರಳೀಧರ್ ಸ್ವಾಗತಿಸಿದರು, ಮೂಲಚಂದ್ರ ಕಾಂಚನ ವಂದಿಸಿದರು.ನಿವೃತ ಪ್ರಾಂಶುಪಾಲರಾದ ಎಸ್. ದುಗ್ಗಪ್ಪ ಗೌಡ ಇವರು ಕೊಡುಗೆಯಾಗಿ ನೀಡಿದ 6 ಕಪಾಟುಗಳಿಗೆ ಪುಸ್ತಕಗಳನ್ನು ತುಂಬಿಸುವ ಮೂಲಕ ತರಗತಿ ಗ್ರಂಥಾಲಯಕ್ಕೆ ಚಾಲನೆ ನೀಡಲಾಯಿತು.

LEAVE A REPLY

Please enter your comment!
Please enter your name here