ಕಾಲಿನ ರಕ್ಷಣೆಗೊಂದೇ ಬಾಟ…ಮಿಕ್ಕಿದಕ್ಕೆಲ್ಲಾ ಹೇಳಿ ಟಾಟಾ…

0

3 ನೇ ವರ್ಷದ ಸಂಭ್ರಮದಲ್ಲಿ ಪುತ್ತೂರಿನ ಬಾಟ ಶೋರೂಮ್
ವಿಶೇಷ ರಿಯಾಯಿತಿ, ಆಕರ್ಷಕ ಗಿಪ್ಟ್, ಕ್ಯಾಶ್‌ಬ್ಯಾಕ್ ವೋಚರ್, ಪೆನ್ಸಿಲ್ ಬಾಕ್ಸ್ ಫ್ರೀ

ಪುತ್ತೂರು: ಬೊಳುವಾರು ಮಹಾವೀರ್ ಮಾಲ್‌ನಲ್ಲಿರುವ ಬಾಟ ಶೋರೂಮ್ ಯಶಸ್ವಿ 3 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಸಂಸ್ಥೆಯು ತನ್ನೆಲ್ಲಾ ಗ್ರಾಹಕರಿಗೆ ವಿಶೇಷ ಆಫರ್‌ನೊಂದಿಗೆ ಆಕರ್ಷಕ ಉಡುಗೊರೆಗಳನ್ನು ಪರಿಚಯಿಸುತ್ತಿದೆ. ಆನಿವರ್ಷರಿ ಸೇಲ್ ಸೆ.16,17 ಮತ್ತು 18 ರಂದು ಒಟ್ಟು 3 ದಿನಗಳ ಕಾಲ ನಡೆಯಲಿದ್ದು ಗ್ರಾಹಕರು ತಮ್ಮ ನೆಚ್ಚಿನ ಬಾಟ ಪಾದರಕ್ಷೆ, ಶೂಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಖರೀದಿಸಲು ಒಂದು ಸುವರ್ಣಾವಕಾಶವಾಗಿದೆ.


ಶೇ.20 ರಿಂದ 50 ರಿಯಾಯಿತಿ
ಬಾಟ ತನ್ನ 3 ನೇ ವರ್ಷದ ಸಂಭ್ರಮದಲ್ಲಿ ತನ್ನೆಲ್ಲಾ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾದರಕ್ಷೆ, ಶೂಗಳನ್ನು ಖರೀದಿಸಲು ಅವಕಾಶ ಮಾಡಿಕೊಟ್ಟಿದೆ. ವಿಶೇಷವಾಗಿ ಶೇ.20 ರಿಂದ 50 ರಷ್ಟು ರಿಯಾಯಿತಿ ಸಿಗಲಿದೆ. ಈ ರಿಯಾಯಿತಿ ಬಹುತೇಕ ಬಾಟದ ಎಲ್ಲಾ ಪಾದರಕ್ಷೆ, ಶೂಗಳ ಮೇಲೆ ಸಿಗಲಿದೆ.


ಆಕರ್ಷಕ ಉಡುಗೊರೆಗಳು
ಬಾಟ ಶೂ, ಪಾದರಕ್ಷೆಗಳಿಗೆ ತನ್ನದೇ ಆದ ವಿಶೇಷತೆ ಇದೆ.ಒಮ್ಮೆ ಬಾಟ ಶೂ,ಪಾದರಕ್ಷೆಗಳನ್ನು ಇಷ್ಟಪಟ್ಟರೆ ಮತ್ತೆ ಅದರಿಂದ ದೂರವಾಗಲು ಸಾಧ್ಯವಿಲ್ಲ. ಈ ವಿಶೇಷ ಆಫರ್‌ನಲ್ಲಿ ರೂ.799 ಕ್ಕಿಂತ ಹೆಚ್ಚು ಬೆಲೆಯ ಶೂ,ಪಾದರಕ್ಷೆಗಳನ್ನು ಖರೀದಿಸಿದರೆ ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದಾಗಿದೆ. ಖರೀದಿಸುವ ಪಾದರಕ್ಷೆ,ಶೂಗಳ ಬೆಲೆ ಹೆಚ್ಚಾದಂತೆ ಇನ್ನಷ್ಟು ಮೌಲ್ಯದ ಗಿಪ್ಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.


ಕ್ಯಾಶ್‌ಬ್ಯಾಕ್ ವೋಚರ್
3 ನೇ ವರ್ಷದ ಈ ಸಂಭ್ರಮದಲ್ಲಿ ಬಾಟಕ್ಕೆ ಭೇಟಿ ನೀಡಿ ರೂ.1 ಸಾವಿರ ದರಕ್ಕಿಂತ ಹೆಚ್ಚು ಬೆಲೆಯ ಪಾದರಕ್ಷೆ, ಶೂ ಖರೀದಿಸುವ ಪ್ರತಿಯೊಬ್ಬರಿಗೂ ಕ್ಯಾಶ್‌ಬ್ಯಾಕ್ ವೋಚರ್ ಸಿಗಲಿದೆ. ಈ ವೋಚರ್ ಅನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಖರೀದಿ ಮೇಲೆ ವಿಶೇಷ ರಿಯಾಯಿತಿಯನ್ನು ಪಡೆಯಬಹುದಾಗಿದೆ.


ರೂ.299 ಮೌಲ್ಯದ ಪೆನ್ಸಿಲ್ ಬಾಕ್ಸ್ ಉಚಿತ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಆಫರ್ ಅನ್ನು ನೀಡಲಾಗಿದ್ದು ರೂ. 899 ಬೆಲೆಗಿಂತ ಹೆಚ್ಚು ಖರೀದಿಸಿದವರಿಗೆ ಅಥವಾ 2 ಜೊತೆ ಶೂ ಖರೀದಿಸುವ ಪ್ರತಿಯೊಬ್ಬರಿಗೂ ರೂ.299 ಬೆಲೆಯ ಪೆನ್ಸಿಲ್ ಬಾಕ್ಸ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಮಕ್ಕಳ ಕಾಲಿಗೆ ಯಾವುದೇ ರೀತಿಯ ಸಮಸ್ಯೆ ಬರದ ರೀತಿಯಲ್ಲಿ ಬಾಟ ಶೂಗಳನ್ನು ತಯಾರಿಸಲಾಗುತ್ತದೆ. ಶೂಗಳಲ್ಲಿ ಆಂಟಿ ಬ್ಯಾಕ್ಟೀರಿಯಾ ಪ್ರೋಟೆಕ್ಷನ್ ಇರಲಿದ್ದು ಇದು ಬ್ಯಾಕ್ಟೀರಿಯಾಗಳ ನಾಶದೊಂದಿಗೆ ಯಾವುದೇ ರೀತಿಯ ದುರ್ವಾಸನೆ ಬರದಂತೆ ತಡೆಯಲಿದೆ.


ಇಂಟರ್‌ನ್ಯಾಷನಲ್ ಬ್ರ್ಯಾಂಡೆಡ್ ಕಂಪೆನಿಯ ಶೂಗಳು ಲಭ್ಯ
ಸುಮಾರು 2 ಸಾವಿರ ಚದರ ಅಡಿ ವಿಸ್ತ್ರೀರ್ಣದಲ್ಲಿರುವ ಬಾಟ ಶೋರೂಮ್ ಸಂಪೂರ್ಣ ಹವಾ ನಿಯಂತ್ರಿತವಾಗಿದೆ. ಬಾಟ ಶೋರೂಮ್‌ನಲ್ಲಿ ಇಂಟರ್‌ನ್ಯಾಷನಲ್ ಬ್ರ್ಯಾಂಡೆಡ್ ಕಂಪೆನಿಗಳಾದ ಹಷ್ ಪಪ್ಪಿಸ್, ಬಬ್ಬಲ್ ಗಮ್ಮರ‍್ಸ್, ಡಿಸ್ನಿಯ ಶೂಗಳು ಲಭ್ಯವಿದೆ.


ಆಫರ್ ಕೇವಲ 3 ದಿನಗಳು ಮಾತ್ರ
ಬಾಟ ಶೋರೂಮ್‌ನ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ರಿಯಾಯಿತಿ ಸೆ.16,17 ಮತ್ತು 18 ಕೇವಲ 3 ದಿನ ಮಾತ್ರ ಇರಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here