ಉಪ್ಪಿನಂಗಡಿ: ಶ್ರೀರಾಮ ಶಾಲೆಯ ಸಹಯೋಗದಲ್ಲಿ ಪುಳಿತ್ತಡಿಯ ಗದ್ದೆಯಲ್ಲಿ ಭತ್ತ ನಾಟಿ ಕಾರ್ಯಕ್ರಮ

0

ಉಪ್ಪಿನಂಗಡಿ:ಉಪ್ಪಿನಂಗಡಿ ಶ್ರೀರಾಮ ಶಾಲೆ ವೇದಶಂಕರ ನಂಗರ ಸಹಯೋಗದಿಂದ, ಜಗದೀಶ್ ಪರಕ್ಕಜೆ ಗೆ ಸೇರಿದ ಗದ್ದೆಯಲ್ಲಿ, ಭತ್ತ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು‌. ಸ್ಥಳ ದಾನಿಗಳಾದ ಜಗದೀಶ್ ಪರಕ್ಕಜೆ, ಮತ್ತುಕಲಾವತಿ ದಂಪತಿಗಳು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಯು.ಜಿ ರಾಧಾ ವಹಿಸಿ ಮಾತನಾಡಿ ಮಕ್ಕಳಿಗೆ ಭತ್ತ ಬೇಸಾಯ ಮತ್ತು ಮಣ್ಣಿನ ಸೊಗಡಿನ ಮಹತ್ವವನ್ನು ಪರಿಚಯಿಸುವ ದೃಷ್ಟಿಯಿಂದ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಪ್ರಾಯೋಜಕರಾಗಿ ಪುಳಿತ್ತಡಿ, ಟೀಂ ದೋಸ್ತಿಲು ಅಧ್ಯಕ್ಷರುಕೇಶವ ಕುಂಟಿನಿ, ಕಿರಣ್ ಗೌಂಡತ್ತಿಗೆ, ಪದ್ಮನಾಭ ಗೌಡ ಬಲ್ಯಾರ ಬೆಟ್ಟು,ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್,ಮುಖ್ಯ ಗುರುಗಳು ಇಂದ್ರಪ್ರಸ್ಥ ವಿದ್ಯಾಲಯದ ವೀಣಾ ಆರ್ ಪ್ರಸಾದ್ , ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ಹೆಚ್.ಕೆ ಪ್ರಕಾಶ್, ಪೋಷಕ ಸಂಘದ ಸದಸ್ಯ ಉದಯ ಅತ್ರಮಜಲು,ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಸದಸ್ಯ ವನಿತಾ ಆರ್ತಿಲ, ಮತ್ತು ಜಯಂತಿ ರಂಗಾಜೆ, ಕೃಷ್ಣ, ಯಂತ್ರ ನಿರ್ವಾಹಕರು, ಉಪಸ್ಥಿತರಿದ್ದರು.

ಗದ್ದೆಗೆ ಹಾಲನ್ನು ಎರೆದು ಪ್ರಾರ್ಥಿಸಿದ ನಂತರ ಇಂದ್ರಪ್ರಸ್ಥ ವಿದ್ಯಾಲಯ ಮತ್ತು ಶ್ರೀರಾಮ ಶಾಲೆಯ ಮಕ್ಕಳಿಂದ ನೇಜಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್ ಸಿ, ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿ, ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ವಂದಿಸಿದರು.

LEAVE A REPLY

Please enter your comment!
Please enter your name here