ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಶಾಲೆಯ ಇಂಟರಾಕ್ಟ್ ಕ್ಲಬ್ – ಇವುಗಳ ಸಹಯೋಗದಲ್ಲಿ ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ದೇರಳಕಟ್ಟೆ ಎ.ಬಿ.ಶೆಟ್ಟಿ ಮೆಮೊರಿಯಲ್ ಇನಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ವೈದ್ಯರುಗಳ ತಂಡದಿಂದ ಉಚಿತ ದಂತ ಚಿಕಿತ್ಸಾ ಶಿಬಿರವು ಸೆ.14ರಂದು ನಡೆಯಿತು.
ಕಾರ್ಯಕ್ರಮವನ್ನು ಶಾಲಾ ಪೋಷಕ ಸಂಘದ ಅಧ್ಯಕ್ಷೆ ಅಕ್ಷತಾ ಪಿ.ಶೆಣೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕಿ ತಾರಾ ಹಲ್ಲುಗಳ ಆರೋಗ್ಯದ ಪ್ರಾಮುಖ್ಯತೆಯ ಕುರಿತು ಮಕ್ಕಳಿಗೆ ಮನವರಿಕೆ ಮಾಡಿದರು.ಈ ಸಂದರ್ಭದಲ್ಲಿ ರೊಟೇರಿಯನ್ ನರಸಿಂಹ ಪೈ, ಶಾಲಾ ಸಂಚಾಲಕ ಭರತ್ ಪೈ, ಪ್ರಾಂಶುಪಾಲೆ ಸಿಂಧೂ ವಿ.ಜಿ ಹಾಗೂ ಉಪ ಪ್ರಾಂಶುಪಾಲೆ ಹೇಮಾವತಿ ಎಂ.ಎಸ್. ಉಪಸ್ಥಿತರಿದ್ದರು.
ರೊಟರಿ ಕ್ಲಬ್ ಪುತ್ತೂರು ಯುವ ಇದರ ಅಧ್ಯಕ್ಷ ಪಶುಪತಿ ಶರ್ಮಾ ಸ್ವಾಗತಿಸಿ , ಶಾಲಾ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ಹತ್ತನೇ ತರಗತಿಯ ವಿದ್ಯಾರ್ಥಿ ಕೆ. ಪವನ್ ಶೆಣೈ ವಂದಿಸಿ, ಎಂಟನೇ ತರಗತಿಯ ಆಪ್ತ ಚಂದ್ರಮತಿ ಮುಳಿಯ ಕಾರ್ಯಕ್ರಮ ನಿರೂಪಿಸಿದರು. ದಿನ ಪೂರ್ತಿ ನಡೆದ ಉಚಿತ ದಂತ ಶಿಬಿರದ ಸದುಪಯೋಗವನ್ನು ಸುಮಾರು ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕ-ಶಿಕ್ಷಕೇತರರು ಪಡೆದರು.