ರೂ. 4,59,96,407.35 ವ್ಯವಹಾರ, ರೂ. 3,72,319,.43 ನಿವ್ವಳ ಲಾಭ, ಶೇ.15 ಡಿವಿಡೆಂಡ್, ಶೇ.65 ಬೊನಸ್-ಎಸ್.ಬಿ ಜಯರಾಮ ರೈ ಬಳಜ್ಜ
ಕೆಯ್ಯೂರು: ಕೆಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ 2022–23ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ವಠಾರದ ಸಭಾಂಗಣದಲ್ಲಿ ಸೆ.16 ರಂದು ಒಕ್ಕೂಟದ ಉಪಾಧ್ಯಕ್ಷರು, ಸಂಘದ ಅಧ್ಯಕ್ಷರಾದ ಎಸ್.ಬಿ ಜಯರಾಮ ರೈ ಬಳಜ್ಜ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದಲ್ಲಿ ಒಟ್ಟು 441 ಸದಸ್ಯರಿದ್ದು ವರದಿ ಸಾಲಿನಲ್ಲಿ ರೂ 4,59,96,407.35 ವ್ಯವಹಾರ ಮಾಡಿ, 3,72,319.43 ನಿವ್ವಳ ಲಾಭ ಬಂದಿರುತ್ತದೆ. ಲಾಭಾಂಶದಲ್ಲಿ ಶೇ.15 ಡಿವಿಡೆಂಡ್ ನೀಡುವುದಾಗಿ ಹಾಗೂ ಶೇ.65 ಸದಸ್ಯರಿಗೆ ಬೋನಸ್ ನೀಡುವುದಾಗಿ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಪಡೆಯಲಾಯಿತು.
2022-23ನೇ ಸಾಲಿನಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ಪೂರೈಸುವಲ್ಲಿ ಪ್ರಥಮ ಸ್ಥಾನ ಪಡೆದ ಲೋಕನಾಥ ಪಕ್ಕಳ ನೂಜಿ, ದ್ವಿತೀಯ ಸ್ಥಾನ ಬಾಬು ಕಣಿಯಾರು, ತೃತೀಯ ಸ್ಥಾನ ಕೆ.ರಾಮಣ್ಣ ಗೌಡ ಮಾಡಾವು ಅತಿ ಹೆಚ್ಚು ಹಾಲು ಪೂರೈಕೆಗಾಗಿ ಸಂಘದ ವತಿಯಿಂದ ಬಹುಮಾನ ನೀಡಲಾಯಿತು ಮತ್ತು ಸಂಘದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಈ ಸಂದರ್ಭದಲ್ಲಿ ದ.ಕ ಹಾಲು ಒಕ್ಕೂಟದ ಶೇಖರಣೆ ಹಾಗೂ ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್ ಇವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೈನುಗಾರ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಕೆದಂಬಾಡಿ, ಕೆಯ್ಯೂರು ಸಿ.ಎ ಬ್ಯಾಂಕ್ ನ ಅದ್ಯಕ್ಷ, ಸಂಘದ ಶಶಿಧರ ರಾವ್ ಬೊಳಿಕಲ, ಸಂಘದ ಮಾಜಿ ನಿರ್ದೇಶಕರಾದ ಮಹಾಲಿಂಗ ಪಾಟಾಳಿ, ವಿಜಯ ಐತ್ತಪ್ಪ ನಾಯ್ಕ, ಶಿವಪ್ಪ ನಾಯ್ಕ ಇವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ದ.ಕ.ಹಾಲು ಒಕ್ಕೂಟ ಉಪ ವ್ಯವಸ್ಥಾಪಾಕ ಸತೀಶ್ ರಾವ್, ಪಶುವೈದ್ಯಾಧಿಕಾರಿ ಡಾ.ಅನುದೀಪ್, ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್, ಹಾಲಿನ ಗುಣಮಟ್ಟ ಮತ್ತು ಸಿಗುವ ಸವಲತ್ತುಗಳ ಬಗ್ಗೆ, ಹಾಲು ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು. ಸಂಘದ ನಿರ್ದೇಶಕರಾದ ರಾಮಣ್ಣ ಗೌಡ ಮಾಡಾವು, ಈಶ್ವರಿ ಜೆ.ರೈ ಸಂತೋಷ್ ನಗರ, ದೇವಿಕಾ ಎ.ಎಸ್., ಪ್ರವೀಣ.ಕೆ ವಿ, ಕೆ.ಗುಡ್ಡಪ್ಪ ರೈ ಕೋರಿಕ್ಕಾರು, ಲೋಕನಾಥ ಪಕ್ಕಳ, ಪದ್ಮನಾಭ. ಪಿ,ಎಸ್, ಪದ್ಮನಾಭ ರೈ ಡಿ, ವಿನಯ ಚಂದ್ರ ಕೆ.ಪಿ, ರಘುಚಂದ್ರ ಭಟ್ ಪಿ.ಆರ್, ಹರಿಣಾಕ್ಷಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಿಂದೂರ ಎಸ್, ಕಾವ್ಯಶ್ರೀ ಎಸ್.ಜಿ, ಅನ್ವಿತಾ ವಿ ರೈ ಪ್ರಾರ್ಥಿಸಿ, ಸಿಬ್ಬಂದಿ ಪದ್ಮಯ್ಯ.ಪಿ. ಹಿಂದಿನ ಸಾಲಿನ ವರದಿ ಮಂಡಿಸಿದರು. ಸಂಘದ ಉಪಾದ್ಯಕ್ಷರಾದ ಚಂದ್ರಹಾಸ ರೈ.ಬಿ. ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಬಾಸ್ಕರ ರೈ ಎಂ. ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಪ್ರಶಾಂತ ಕುಮಾರ್ ರೈ ಸಣಂಗಳ, ಲಲಿತಾ ರೈ ಮಾಡಾವು, ರೋಹಿತಾಕ್ಷ ರೈ ಮಠ, ಗಂಗಾಧರ ಪೂಜಾರಿ ಸಹಕರಿಸಿದರು.