ವ್ಯಕ್ತಿ ಧರ್ಮದ ಜೊತೆಗೆ ವೃತ್ತಿ ಧರ್ಮದ ಪಾಲನೆಯಾದಾಗ ಮೌಲ್ಯ ವೃದ್ಧಿ- ಪೇಸ್‌ನ ಇಂಜಿನಿಯರ‍್ಸ್ ದಿನಾಚರಣೆಯಲ್ಲಿ ಡಾ.ವಿಜಯ ಸರಸ್ವತಿ

0

ಪುತ್ತೂರು: ಪುತ್ತೂರು ಅಸೋಸಿಯೇಷನ್ ಆಪ್ ಸಿವಿಲ್ ಇಂಜಿನಿಯರ್ (ಪೇಸ್)ನ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ ಯು ಸೆ.18ರಂದು ನೆಹರು ನಗರದ ಮಾಸ್ಟರ್ ಪ್ಲಾನರಿಯ ಸರ್.ಎಂ.ವಿ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಸ್ನಾತಕೋತ್ತರ ಕಾಲೇಜಿನ ಡೀನ್ ಡಾ.ವಿಜಯ ಸರಸ್ವತಿ ಮಾತನಾಡಿ, ನಾವು ಪ್ರಕೃತಿಯ ಆರಾಧಕರು. ಪ್ರಕೃತಿ ಸಂಸ್ಕೃತಿ ಉಳಿದಾಗ ಮೌಲ್ಯ ವರ್ಧನೆಯಾಗುತ್ತದೆ. ವೃತ್ತಿ ಯಾವುದೇ ಇರಲಿ ಅದರಲ್ಲಿ ವ್ಯಕ್ತಿ ಧರ್ಮ ಹಾಗೂ ವೃತ್ತಿ ಧರ್ಮ ಪಾಲನೆ ಮಾಡಿದಾಗ ಅದಕ್ಕೆ ಮೌಲ್ಯ ಬರುತ್ತದೆ. ನಮ್ಮ ಮೌಲ್ಯದ ವೃದ್ಧಿಯ ಜೊತೆಗೆ ಜೀವನದಲ್ಲಿ ಸಾಫಲ್ಯತೆ ಹೊಂದಲು ಸಾಧ್ಯ ಎಂದರು. ಸುಸ್ಥಿರ ಬದುಕಿಗೆ ಕಟ್ಟಡಗಳು ಮುಖ್ಯ. ಅದಕ್ಕೆ ಸಿವಿಲ್ ಇಂಜಿನಿಯರ್‌ಗಳು ಮುಖ್ಯ. ಯಾವುದೇ ಕಟ್ಟಡ ಬಿದ್ದಾಗ ಕಟ್ಟಡ ಮಾತ್ರವಲ್ಲ ವೃತ್ತಿ ಮೌಲ್ಯದ ಅಧಪತನವಾದಂತೆ. ಸರ್.ಎಂ ವಿಶ್ವೇಶ್ವರಯ್ಯನರವರು ಮಾಡಿದ ಸಾಧನೆ ಇಂದಿಗೂ ಶಾಶ್ವತವಾಗಿದ್ದು ನಮ್ಮ ಸಾಧನೆಗಳು ಬದುಕಿನ ಸಾರ್ಥಕ್ಯದೆಡೆಗೆ ಸಾಗಬೇಕು. ಜನರು ಗುರುತಿಸುವ ಹಿಂದೆ ಬಹಳಷ್ಟು ಜವಾಬ್ದಾರಿ ನಮ್ಮ ಮೇಲಿದ್ದು, ಅದನ್ನು ಅರಿತು ಮುನ್ನಡೆಯಬೇಕಾದ ಆವಶ್ಯಕತೆಯಿದೆ ಎಂದರು.
ಪೇಸ್‌ನ ಗೌರವಾಧ್ಯಕ್ಷ ಎಸ್.ಕೆ ಆನಂದ್ ಕುಮಾರ್ ಮಾತನಾಡಿ, ಜೀವನದಲ್ಲಿ ಸ್ಪರ್ಧೆಯೇ ಮುಖ್ಯವಲ್ಲ. ಸ್ಪರ್ಧೆಗಿಂತ ಸಹಕಾರ ಮುಖ್ಯ. ಪರಸ್ಪರ ಸಹಕಾರ ಇದ್ದಾಗ ಸ್ಪರ್ಧೆಗೆ ಬ್ರೇಕ್ ಹಾಕಬಹುದು. ನಮ್ಮ ಸಾಧನೆ ಕೇವಲ ಹೆಸರು ಗಳಿಕೆಗೆ ಸೀಮಿತವಾಗಿರಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪೇಸ್‌ನ ಅಧ್ಯಕ್ಷ ಅಕ್ಷಯ್ ಎಸ್.ಕೆ ಮಾತನಾಡಿ, ಸರ್.ಎಂ ವಿಶ್ವೇಶ್ವರಯ್ಯನವರು ದೊಡ್ಡ ವ್ಯಕ್ತಿಯಾದರೂ ಅವರ ಯೋಚನೆಗಳು ಸಾಮಾನ್ಯರಂತೆ ಇತ್ತು. ಅವರ ಗುಣಗಳ ಶೇ. ಒಂದು ಅಂಶವನ್ನಾದರೂ ಇಂಜಿನಿಯರ್‌ಗಳು ಜೀವನದಲ್ಲಿ ಬರಬೇಕು. ಇಂಜಿನಿಯರ್‌ಗಳಾದ ನಾವೆಲ್ಲಾ ಒಂದೇ ಕುಟುಂಬದವರು. ಪೆಸ್ ಹಾಗೂ ಎಸಿಸಿಐ ಎರಡು ಸಂಘಟನೆಗಳು ಸಹೋದರಂತೆ ಮುನ್ನಡೆಯಲಿದೆ ಎಂದರು.

ಸನ್ಮಾನ:
ಅಡ್ಯನಡ್ಕ ವಾರಣಾಸಿ ರಿಸರ್ಚ್ ಫೌಂಡೇಶನ್‌ನ ಡಾ.ಅಶ್ವಿನಿ ಕೃಷ್ಣಮೂರ್ತಿಯವರನ್ನು ಸನ್ಮಾನಿಸಲಾಯಿತು. ಇತ್ತೀಚಿಗೆ ನಿಧನರಾದ ವಿನ್ಯಾಸ್ ಕನ್ ಸ್ಟ್ರಕ್ಷನ್‌ನ ಕಿಶೋರ್ ಕುಮಾರ್‌ರವರಿಗೆ ನೀಡುವ ಮರಣೋತ್ತರ ಗೌರವವನ್ನು ಅವರ ಪುತ್ರ ಕಶ್ಯಪ್ ನೀಡಿ ಗೌರವಿಸಲಾಯಿತು.

ಪ್ರತಿಭಾ ಪುರಸ್ಕಾರ:
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸೋಸಿಯೇಶನ್‌ನ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರವನ್ನು ನಮನ, ನಯನ, ಅದಿತಿ ಪುತ್ತೂರಾಯ, ಗುರುಶರ್ಮ, ಸಾಯಿ ಸುಬ್ರಹ್ಮಣ್ಯ, ಸಾಯಿ ಲಕ್ಷ್ಮೀ, ಧಾತ್ರಿ, ಕಶ್ಯಪ್, ಆದಿತ್ಯ ನಾರಾಯಣ, ನೇಹಾ, ಶ್ಯಾಮ್ ರವರಿಗೆ ನೀಡಿ ಗೌರವಿಸಲಾಯಿತು.
ಪ್ರಸನ್ನ ಎನ್ ಭಟ್ ಪ್ರಾರ್ಥಿಸಿದರು. ಆಧ್ಯಕ್ಷ ಅಕ್ಷಯ್ ಎಸ್.ಕೆ ಸ್ವಾಗತಿಸಿದರು. ಉಪಾಧ್ಯಕ್ಷ ಸತ್ಯಗಣೇಶ್, ಹರೀಶ್ ಪುತ್ತೂರಾಯ ವಸಂತ ಭಟ್, ಅರ್ಜುನ್ ಎಸ್.ಕೆ. ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಅಧ್ಯಕ್ಷರಾದ ರಮೇಶ್ ಭಟ್ ಹಾಗೂ ರವಿರಾಮ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಮ್ ಪ್ರಕಾಶ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು.

LEAVE A REPLY

Please enter your comment!
Please enter your name here