ಉಪ್ಪಿನಂಗಡಿ ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 8ನೇ ವಾರ್ಷಿಕ ಸಾಮಾನ್ಯ ಸಭೆ

0

ರೂ. 35.50 ಕೋಟಿ ವ್ಯವಹಾರ, ರೂ 12.96 ಲಕ್ಷ ಲಾಭ, ಶೇ.14 ಡಿವಿಡೆಂಟ್

ಉಪ್ಪಿನಂಗಡಿ : ಅನುಗ್ರಹ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು 2022-23 ನೇ ಸಾಲಿನಲ್ಲಿ ರೂ.12.96 ಲಕ್ಷ ಲಾಭ ಗಳಿಸಿದ್ದು ಸದಸ್ಯರಿಗೆ ಶೇ.14 ಡಿವಿಡೆಂಟ್ ನೀಡುವುದೆಂದು ಸಹಕಾರಿಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್‌ರವರು ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.
ಸೆ.17 ರಂದು ನಡೆದ ಸಂಘದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವರ್ಷಾಂತ್ಯದಲ್ಲಿ 34,63,600.00 ಪಾಲು ಬಂಡವಾಳ ಸಂಗ್ರಹವಾಗಿದ್ದು ರೂ. 7,83,53,307.60 ಠೇವಣಿಯು ವಿವಿಧ ಖಾತೆಗಳಲ್ಲಿ ಜಮೆ ಇರುತ್ತದೆ. ಆರ್ಥಿಕ ವರ್ಷದ ಕೊನೆಗೆ ನಮ್ಮ ಸಹಕಾರಿ ಸಂಘವು ರೂ.35,50,67,332.83 ವ್ಯವಹಾರವನ್ನು ಮಾಡಿದ್ದು 12.96 ಲಕ್ಷ ಲಾಭ ಬಂದಿರುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.


ವ್ಯಾಸಾಂಗದಲ್ಲಿ ಶೇ. 80% ಕ್ಕಿಂತ ಅಧಿಕ ಅಂಕ ಪಡೆದ ಸಂಘದ ಸದಸ್ಯರ ೭ ಮಕ್ಕಳಿಗೆ ಪ್ರೋತ್ಸಾಹ ನೀಡಿ ಗೌರವಿಸಲಾಯಿತು ಹಾಗೂ ಅಧಿಕ ಮೊತ್ತದ ಠೇವಣಿಯನ್ನು ತೊಡಗಿಸಿದ ಸದಸ್ಯರು ನಿರ್ದೇಶಕರು ಆಗಿರುವ ರೋಬರ್ಟ್ ಡಿಸೋಜ ರವರನ್ನು ಗೌರವಿಸಲಾಯಿತು. ಅದರಂತೆಯೇ ಸಹಕಾರಿ ಸಂಘದ ಸಿಬ್ಬಂದಿಯಾದ ಸಂತೋಷ್ ಫ್ರಾನ್ಸಿಸ್ ಪಿಂಟೊರವರ ಸೇವೆಯನ್ನು ಗುರುತಿಸಿ ಅಧ್ಯಕ್ಷರು ಗೌರವಿಸಿದರು.


ಸಹಕಾರಿಯ ಉಪಾಧ್ಯಕ್ಷರಾದ ಜೆರೋಮ್ ಬ್ರ್ಯಾಗ್ಸ್ ನಿರ್ದೆಶಕರಾದ ರೋಬರ್ಟ್ ಡಿಸೋಜ, ಗ್ರೆಗೋರಿ ಲೋಬೊ, ಹೆನ್ರಿ ಲೋಬೊ, ವಿನ್ಸೆಂಟ್ ಮಿನೇಜಸ್, ಮ್ಯಾಕ್ಸಿಂ ಲೋಬೊ, ಸಿಲ್ವೆಸ್ಟರ್ ವೇಗಸ್, ಸೆಬೆಸ್ಟಿಯನ್ ಲೋಬೊ, ಐರಿನ್ ಲೋಬೊ, ಫೆಲ್ಸಿ ಡಿಸೋಜ ರವರು ಸಭೆಯಲ್ಲಿ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕೇಂದ್ರ ಕಛೇರಿಯ ಗುಮಾಸ್ತೆ ತನುಶ್ರೀ ಹಾಗೂ ನೆಲ್ಯಾಡಿ ಶಾಖೆಯ ಹರ್ಷಿತಾ ಪ್ರಾರ್ಥಿಸಿದರು. ಸಹಕಾರಿಯ ಅಧ್ಯಕ್ಷ ವಿನ್ಸೆಂಟ್ ಫೆರ್ನಾಂಡಿಸ್ ಸ್ವಾಗತಿಸಿದರು. ಕಡಬ ಶಾಖೆಯ ವ್ಯವಸ್ಥಾಪಕರಾದ ಸಿಜು ಟಿ ಹಿಂದಿನ ಸಭೆಯ ನಡವಳಿಗಳನ್ನು ವಾಚಿಸಿದರು ಹಾಗೂ ಗುಮಾಸ್ತರಾದ ಗೋಪಾಲಕೃಷ್ಣ 2022-23ನೇ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಸಭೆಯ ಮುಂದಿರಿಸಿದರು. ಲಾಭ ನಷ್ಟ ಹಾಗೂ ಆಸ್ತಿ ಜವಾಬ್ದಾರಿ ತಖ್ತೆಯನ್ನು ಸಭೆಯಲ್ಲಿ ಕೇಂದ್ರ ಕಛೇರಿಯ ಲೆಕ್ಕಿಗ ಸಂತೋಷ್ ಪಿಂಟೊ ಮಂಡಿಸಿದರು. ೨೦೨೩ -೨೪ ನೇ ಸಾಲಿನ ಅಂದಾಜು ಮುಂಗಡ ಬಜೆಟನ್ನು ನೆಲ್ಯಾಡಿ ಶಾಖೆಯ ವ್ಯವಸ್ಥಾಪಕ ಶ್ರೇಯಸ್ ಶೆಟ್ಟಿ ಸಭೆಯ ಮುಂದಿಟ್ಟರು. ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವ ವಿಲ್ಫ್ರೆಡ್ ವಿನ್ಸೆಂಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಪಿಗ್ಮಿ ಸಂಗ್ರಹಕರಾದ ವಿಕ್ಟರ್ ಪಿಂಟೊ ಹಾಗೂ ಸೋಮನಾಥ ಸಹಕರಿಸಿದರು. ಸಭೆಯು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here