ಕಾನೂನು ಮಹಾವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ 9ನೇ ಸ್ಥಾನ ಪಡೆದ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯ
ಪುತ್ತೂರು: ದೇಶದ ಪ್ರತಿಷ್ಠಿತ ಸಮೀಕ್ಷಾ ಸಂಸ್ಥೆಯಾದ BW ಲೀಗಲ್ ವರ್ಲ್ಡ್ ಬಿಡುಗಡೆ ಮಾಡಿದ ಕಾನೂನು ಮಹಾವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ದೇಶದ ಟಾಪ್ 100 ಕಾನೂನು ಮಹಾವಿದ್ಯಾಲಯಗಳಲ್ಲಿ ಸೌತ್ ಜೋನ್ ವಿಭಾಗದಲ್ಲಿ 9ನೇ ಸ್ಥಾನವನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪಡೆದುಕೊಂಡಿದ್ದು, ದೇಶದ ಟಾಪ್ 100 ಕಾನೂನು ಮಹಾವಿದ್ಯಾಲಯಗಳಲ್ಲಿ 59ನೇ ಸ್ಥಾನವನ್ನು ಪಡೆದುಕೊಂಡಿದೆ.
ಆ ಮೂಲಕ ಈಗಾಗಲೇ ಮೌಲ್ಯಯುತವಾದ ಶಿಸ್ತುಬದ್ದ ಕಾನೂನು ಶಿಕ್ಷಣವನ್ನು ನೀಡುತ್ತಿರುವ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯಕ್ಕೆ ಮತ್ತೊಂದು ಸಾಧನೆಯ ಗರಿ ಸೇರಿಕೊಂಡಿದೆ. ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗಸಂಸ್ಥೆಯಾಗಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯ ಕಳೆದ 35 ವರ್ಷಗಳಿಂದ ಸತತವಾಗಿ ವಿವಿಧ ರೀತಿಯ ಶೈಕ್ಷಣಿಕ ಹಾಗೂ ಸಾಮಾಜಿಕ ವಲಯದಲ್ಲಿ ಸಾಧನೆಯನ್ನು ಮಾಡುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳನ್ನು ಕಾನೂನಿನ ವಿವಿಧ ಕ್ಷೇತ್ರಗಳಿಗೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ವಿವಿಧ ಉನ್ನತ ಹುದ್ದೆಗಳಿಗೆ ಕಳುಹಿಸಿದ ಖ್ಯಾತಿಯನ್ನು ಗಳಿಸಿದೆ. ವಿಶೇಷವೆಂದರೆ ಕಳೆದ ಬಾರಿಯ BW ಲೀಗಲ್ ವರ್ಲ್ಡ್ ಬಿಡುಗಡೆ ಮಾಡಿದ ಕಾನೂನು ಮಹಾವಿದ್ಯಾಲಯಗಳ ಶ್ರೇಯಾಂಕ ಪಟ್ಟಿಯಲ್ಲಿ ಸಹಾ ಸ್ಥಾನವನ್ನು ಪಡೆದುಕೊಂಡಿತ್ತು. ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಈ ಸಾಧನೆಯನ್ನು ಆಡಳಿತ ಮಂಡಳಿ, ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರು ಹಾಗೂ ಪ್ರಾಂಶುಪಾಲರು ಶ್ಲಾಘಿಸಿದ್ದಾರೆ.