ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪುತ್ತೂರು: ನೆಕ್ಕಿಲಾಡಿಯ ರೈಟ್ ಚಾಯ್ಸ್ ಪೆಟ್ರೋಲ್ ಪಂಪ್‌ನಲ್ಲಿ ಸೆ.16ರ ಮಧ್ಯರಾತ್ರಿಯ ವೇಳೆ ಕಳ್ಳತನವಾಗಿರುವ ನಡೆದಿದೆ.ಕಳ್ಳ ಗ್ಲಾಸ್ ಡೋರ್‌ನ ಲಾಕ್ ಪುಡಿಗೈದು ಒಳಬಂದು ಕ್ಯಾಶ್ ಡ್ರಾವರ್‌ನಲ್ಲಿದ್ದ 30 ಸಾವಿರ ರೂ. ನಗದು ಕಳವು ಮಾಡಿದ್ದಾನೆ. ಕಳ್ಳತನ ಮಾಡುವ ದೃಶ್ಯ ಕ್ಯಾಬಿನ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ರೈನ್‌ಕೋಟ್, ಹೆಲ್ಮೆಟ್ ಧರಿಸಿ ಬಂದು ಟಾರ್ಚ್ ಹಿಡಿದು ಕ್ಯಾಬಿನ್ ಜಾಲಾಡುವ ದೃಶ್ಯ ಸೆರೆಯಾಗಿದೆ.
ಈ ಕುರಿತು ಪೆಟ್ರೋಲ್ ಬಂಕ್ ಮಾಲಕ ನವಾಝ್ ಎಂಬವರು ಪೊಲೀಸರಿಗೆ ಮಾಹಿತಿ ನೀಡಿದ್ದು,ಕಚೇರಿಯ ಬಗ್ಗೆ ಮಾಹಿತಿಯಿರುವವರೇ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.