ಪುತ್ತೂರು: ಪುತ್ತೂರು ಮುಖ್ಯ ರಸ್ತೆಯಲ್ಲ್ಲಿರುವ ಧರ್ಮಸ್ಥಳ ಮಂಜುಶ್ರೀ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ 2022-223ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.23ರಂದು ಬೆಳಿಗ್ಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನ, ಬಪ್ಪಳಿಗೆಯಲ್ಲಿ ಸಂಘದ ಅಧ್ಯಕ್ಷ ಎ. ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪರಿವಾರ ಸೊಸೈಟಿಯು ಕಡಬ ಭಾಗೀರಥಿ ಟವರ್ಸ್ನಲ್ಲಿ, ಕೊಕ್ಕಡದ ಸಮ್ಯಕ್ ಸಂಕೀರ್ಣದಲ್ಲಿ , ಮಂಗಳೂರಿನ ಎನ್ಫೋರ್ಸ್ ಲೆಜೋರಿನ್ ಕಾಂಪ್ಲೆಕ್ಸ್, ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿಯ ರಾಜಾರಾಮ್ ಕಟ್ಟಡದಲ್ಲಿ ಶಾಖೆಗಳನ್ನು ಹೊಂದಿದ್ದು ಮುಂದಿನ ದಿನದಲ್ಲಿ ಉಪ್ಪಿನಂಗಡಿ, ಈಶ್ವರ ಮಂಗಲ ಹಾಗೂ ಬೆಳ್ತಂಗಡಿಯಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಪ್ರಕೃತ ಸೊಸೈಟಿಯಲ್ಲಿ 1706 ಎ ತರಗತಿ ಸದಸ್ಯರಿದ್ದು 98,89,900ಕೋಟಿ ರೂ ಪಾಲು ಬಂಡವಾಳ ಹೊಂದಿದೆ. ಮುಂದಿನ ದಿನದಲ್ಲಿ ಪಾಲು ಬಂಡವಾಳವನ್ನು 1.25 ಕೋಟಿಗೆ ಹೆಚ್ಚಿಸುವುದು, ಪ್ರಸಕ್ತ 32,16,38,823 ಲಕ್ಷ ಠೇವಣಿಯಿದ್ದು ಮುಂದಿನ ವರ್ಷ 37 ಕೋಟಿಗೆ ತಲುಪುವ ಗುರಿಯನ್ನು ಹೊಂದಿದೆ ಎಂದರು. ವರದಿ ವರ್ಷದಲ್ಲಿ ಸೊಸೈಟಿಯು 153.51 ಕೋಟಿ ವ್ಯವಹಾರ ನಡೆಸಿ 49,73,971.00 ಲಕ್ಷ ರೂ ಲಾಭಗಳಿಸಿದೆ. 25,03,12,155 ಹೊರ ಬಾಕಿ ಸಾಲವಿದೆ. 2022-23ನೇ ಸಾಲಿನಲ್ಲಿ ಎಸ್ಎಸ್ಎಲ್ಸಿಯಲ್ಲಿ 85%, ಪಿಯುಸಿಯಲ್ಲಿ 75% ಕ್ಕಿಂತ ಹೆಚ್ಚು ಅಂಕ ಪಡೆದ ಸೊಸೈಟಿ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಿದ್ದೇವೆ ಎಂದು ತಿಳಿಸಿ ಸರ್ವಸದಸ್ಯರು ಸಕಾಲದಲ್ಲಿ ಸಭೆಗೆ ಆಗಮಿಸಿ ಸಭೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸುವಂತೆ ಸೊಸೈಟಿಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.