ಸೆ.24: ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ನೂತನ ಬದ್ರಿಯಾ ರೆಸಿಡೆನ್ಸಿ ಉದ್ಘಾಟನೆ

0

ಪುತ್ತೂರು: ಮೊಟ್ಟೆತ್ತಡ್ಕ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ನಿರ್ಮಿಸಲ್ಪಟ್ಟ ನೂತನ ಬದ್ರಿಯಾ ರೆಸಿಡೆನ್ಸಿಯ ಉದ್ಘಾಟನೆಯು ಸೆ.24 ರಂದು ಸಂಜೆ ನೆರವೇರಲಿದೆ.
ಕುಂಬೋಳ್ ಮನೆತನದ ಸುಪುತ್ರರು, ಹಲವಾರು ಸಂಘ-ಸಂಸ್ಥೆಗಳಿಗೆ ನೇತೃತ್ವ ನೀಡುತ್ತಿರುವ ಅಸಯ್ಯದ್ ಅಲೀ ತಂಙಳ್ ಕುಂಬೋಳ್ ರವರು ರೆಸಿಡೆನ್ಸಿಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕರಾದ ಅಶೋಕ್ ಕುಮಾರ್ ರೈ, ಅತಿಥಿಗಳಾಗಿ ಮೊಟ್ಟೆತ್ತಡ್ಕ ಖತೀಬರಾದ ಉಸ್ತಾದ್ ಅಬ್ಬಾಸ್ ಮದನಿ, ಮುಕ್ರಂಪಾಡಿ ಖತೀಬ್ ಸಿದ್ಧೀಕ್ ಫೈಝಿ, ಇಸ್ಮಾಯಿಲ್ ಮದನಿ ಕಂಬಳಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕಾವು ಹೇಮನಾಥ ಶೆಟ್ಡಿ ಹಾಗೂ ಮಹಮದ್ ಬಡಗನ್ನೂರು, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿ, ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಶೈಲಾ ಪೈ ಸಹಿತ ಹಲವರು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬೂಬಕ್ಕರ್ ರವರು ವಹಿಸಲಿದ್ದಾರೆ ಎಂದು ಬದ್ರಿಯಾ ಜುಮಾ ಮಸೀದಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here