ಬ್ರೈಟ್ ಭಾರತ್ ಪರಿಚಯಿಸುತ್ತಿದೆ ಅದೃಷ್ಟ ಸ್ಕೀಮ್ ಯೋಜನೆ
ಪುತ್ತೂರು: ಕೇವಲ 1 ಸಾವಿರ ರೂಗಳನ್ನು ಪಾವತಿಸುವ ಮೂಲಕ ನಿಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುವ ಒಂದು ಹೊಸ ಯೋಜನೆಯನ್ನು ಬ್ರೈಟ್ ಭಾರತ್ ಸಂಸ್ಥೆ ಸಾದರಪಡಿಸುತ್ತಿದೆ. 1 ಸಾವಿರದಂತೆ 20 ಕಂತುಗಳಲ್ಲಿ ಹಣ ಪಾವತಿಸುವ ಸ್ಕೀಮ್ ಇದಾಗಿದ್ದು ಪ್ರತಿ ತಿಂಗಳು ಡ್ರಾ ನಡೆಸುವ ಮೂಲಕ ಅದೃಷ್ಟಶಾಲಿಗಳಿಗೆ ಮನೆ,ಕಾರು,ಬೈಕ್,ಸ್ಕೂಟರ್,ಚಿನ್ನ,ಡೈಮಂಡ್ ಸೇರಿದಂತೆ ಲಕ್ಷಾಂತರ ನಗದು ಕೂಡ ಗೆಲ್ಲುವ ಅವಕಾಶವಿದೆ. ಪುತ್ತೂರು, ಸುಳ್ಯ ಭಾಗದಲ್ಲಿ ಪ್ರಥಮವಾಗಿ ಆರಂಭವಾದ ಬ್ರೈಟ್ ಭಾರತ್ ಯೋಜನೆಯು ಬಡವನ ಕನಸಿಗೆ ಬೆಳಕಾಗುವ ನಿಟ್ಟಿನಲ್ಲಿ ಈ ವಿಭಿನ್ನ ಯೋಜನೆಯನ್ನು ಜಾರಿ ಮಾಡಿದ್ದು ಇದರಲ್ಲಿ ಒಟ್ಟು ನಾಲ್ಕು ಮನೆಗಳು, ಕಾರು, ಬೈಕ್, ಆಕ್ಟೀವಾ ಸ್ಕೂಟರ್, ಚಿನ್ನ, ಡೈಮಂಡ್,ನಗದು ಹೀಗೆ ಲಕ್ಷಾಂತರ ಬಹುಮಾನಗಳು ಇವೆ.
ಹಣ ಪಾವತಿಸಿ ಬಹುಮಾನ ಗೆಲ್ಲಿರಿ
ಪ್ರತಿ ತಿಂಗಳು 1 ಸಾವಿರ ರೂಪಾಯಿಗಳಂತೆ 20 ತಿಂಗಳ ಸ್ಕೀಮ್ ಯೋಜನೆ ಇದಾಗಿದೆ. ಮೊದಲ 20 ಕಂತುಗಳ ತನಕ ಮನೆ,ಕಾರು,ಚಿನ್ನ ಸೇರಿದಂತೆ ಬಂಪರ್ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಕೊನೆಯಲ್ಲಿ ಉಳಿದವರಿಗೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಇನ್ವರ್ಟರ್, ಸೋಫಾ, ಚಿನ್ನದ ಉಂಗುರ, ಚಿನ್ನದ ರಿಂಗ್, ಚಿನ್ನದ ಚೈನ್ ಇವುಗಳಲ್ಲಿ ತಮ್ಮಿಷ್ಟದ ಬಹುಮಾನವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಡ್ರಾ ವಿಜೇತರಾದವರು ಮುಂದಿನ ಕಂತು ಕಟ್ಟಬೇಕಾಗಿಲ್ಲ ಇದಲ್ಲದೆ ಪ್ರತಿ ಡ್ರಾದಲ್ಲೂ ಆಯ್ಕೆ ಮಾಡಿದ 10 ಮಂದಿಗೆ ಆಕರ್ಷಕ ಉಡುಗೊರೆಗಳು ಇದೆ. ಮೊದಲ ಡ್ರಾವು ಅ.9 ರಂದು ನಡೆಯಲಿದೆ.ಸಂಸ್ಥೆಯ ಪ್ರಧಾನ ಕಛೇರಿ ಪುತ್ತೂರು ಕಲ್ಲಿಮಾರ್ನಲ್ಲಿರುವ ಕೀರ್ತನಾ ಪ್ಯಾರಡೈಸ್ನಲ್ಲಿ ಆರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ 6360253651, 6360253651, 7019843134 ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.